Advertisement

ರಕ್ಕಸಗಿ ತಂಗಡಗಿ ಯುದ್ಧ ನೆನಪಿಸಿದ ವಾಜಪೇಯಿ

11:34 AM Aug 17, 2018 | |

ತಾಳಿಕೋಟೆ: ಅಜಾತಶತ್ರು ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ತಾಳಿಕೋಟೆ ಪಟ್ಟಣದ ಕಾರ್ಯಕರ್ತರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

Advertisement

1994ರ ವಿಧಾನಸಭಾ ಚುನಾವಣೆಯ ನಿಮಿತ್ತ ತಾಳಿಕೋಟೆಗೆ ಭೇಟಿ ನೀಡಿದ್ದ ವಾಜಪೇಯಿ ಅವರು ವಿಜಯನಗರ ಸಾಮ್ರಾಜ್ಯದ ತಾಳಿಕೋಟೆಯ ರಕ್ಕಸಗಿ ತಂಗಡಗಿ ಯುದ್ಧದ ಇತಿಹಾಸ ಓದಿದ ವಿಷಯವನ್ನು ನೆನಪಿಸಿಕೊಂಡಿದ್ದರಲ್ಲದೇ ವಿಜಯನಗರ ಸಾಮ್ರಾಜ್ಯದ ಯದ್ಧದ ಭೂಮಿ ಹಾಗೂ ಶರಣರ ನಾಡಿನ ಭೂಮಿಯ ಸ್ಪರ್ಶದಿಂದ ಧನ್ಯನಾಗಿದ್ದೇನೆಂದು ಕಾರ್ಯಕರ್ತರ ಸಭೆಯಲ್ಲಿ ಹಂಚಿಕೊಂಡಿದ್ದರು.

1989ರಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಜಮ್ಮು ಕಾಶ್ಮೀರದ ಲಾಲ ಚೌಕ್‌ನಲ್ಲಿ ತಿರಂಗಾ ಧ್ವಜ ಹಾರಿಸಲು ಕಾಶ್ಮೀರ ಚಲೋ ಹಮ್ಮಿಕೊಂಡಾಗ ಅಟಲ್‌ಬಿಹಾರಿ ವಾಜಪೇಯಿ ಅವರು ತಾಳಿಕೋಟೆಯ ಬಿಜೆಪಿ ಕಾರ್ಯಕರ್ತರಿಗೆ
ಅಹ್ವಾನ ನೀಡುವುದರ ಜೊತೆಗೆ ದೆಹಲಿ ಮೂಲಕ ಎಬಿವಿಪಿ ಮತ್ತು ಬಿಜೆಪಿಯಿಂದಿಗೆ ಒಗ್ಗೂಡಿ ಕಾಶ್ಮೀರ ಚಲೋ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ಜಮ್ಮು ಕಾಶ್ಮೀರಿನ ಜೆಕೆಎಲ್‌ಎಫ್‌ ಪರಿಷತ್‌ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಲ್ಲಿಂದ ಎಲ್ಲ ಕಾರ್ಯಕರ್ತರನ್ನು ಹಿಂದುರಿಗಿಸುವಂತಹ ಕಾರ್ಯ ಮಾಡಿತ್ತು ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತ ಬಾಳುಸಿಂಗ್‌ ವಿಜಯಪುರ ಹಾಗೂ ಸುರೇಶ ಹಜೇರಿ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ತಾಳಿಕೋಟೆ ಇತಿಹಾಸವನ್ನು ತಾಳಿಕೋಟೆ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನೆನಪಿಸಿಕೊಂಡಿದ್ದರು. ಮೊದಲ ಬಾರಿಗೆ ವಾಜಪೇಯಿ ತಾಳಿಕೋಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಳಿಕೋಟೆಯ ಮುಖಂಡರು ವಾಜಪೇಯಿ ಅವರನ್ನು ಸನ್ಮಾನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next