Advertisement

ಗುಜರಾತ್‌ನ 55ರ ಹರೆಯದ ವೈಷ್ಣೋದೇವಿ ಯಾತ್ರಿಕ ರಿಯಾಸಿಯಲ್ಲಿ ಸಾವು

06:28 AM Jan 21, 2019 | Team Udayavani |

ಜಮ್ಮು : ಗುಜರಾತ್‌ನ 55ರ ಹರೆಯದ ವೈಷ್ಣೋ ದೇವಿ ಯಾತ್ರಿಕರೋರ್ವರು ಜಮ್ಮು ಕಾಶ್ಮೀರ ಜಿಲ್ಲೆಯ ರಿಯಾಸಿ ಯಲ್ಲಿ ಹೃದಯ ಸ್ತಂಭನಗೊಂಡು ನಿಧನ ಹೊಂದಿರುವುದಾಗಿ ಪೊಲೀಸರು ಇಂದು ಸೋಮವಾರ ತಿಳಿಸಿದ್ದಾರೆ.

Advertisement

ಮೃತ ಯಾತ್ರಿಕ ಅಹ್ಮದಾಬಾದ್‌ ನಿವಾಸಿಯಾಗಿರುವ ಪ್ರಕಾಶ್‌ ಭಾಯಿ ಎಂದು ಗೊತ್ತಾಗಿದೆ. ಇವರು ನಿನ್ನೆ ವೈಷ್ಣೋ ದೇವಿ ದೇವಸ್ಥಾನದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿ ತಮ್ಮ ಕುಟುಂಬದವರೊಂದಿಗೆ ಕತ್ರಾದಲ್ಲಿನ ತಮ್ಮ ಹೊಟೇಲ್‌ ಕೋಣೆಗೆ ಮರಳಿದಾಗ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. 

ಒಡನೆಯೇ ಪ್ರಕಾಶ್‌ ಭಾಯಿ ಅವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಅದಾಗಲೇ ರೋಗಿ ಮೃತಪಟ್ಟಿರುವುದಾಗಿ ಪ್ರಕಟಿಸಿದರು. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next