Advertisement
ಸಂಗೀತ ಹೇಗೆ ಒಂಟಿತನ ನಿರ್ಮೂಲನೆಗೆ ಸಹಕಾರಿ
Related Articles
Advertisement
ಕೆಲವೊಮ್ಮೆ ಸಂಗೀತದ ನಾದವು ನಮ್ಮ ಹೃದಯದ ಧ್ವನಿಯಂತೆ ಕೆಲಸ ಮಾಡುತ್ತದೆ. ಇದು ನಮ್ಮ ಆತ್ಮಕ್ಕೆ ಸ್ಪರ್ಶಿಸುವಂತಹ ಅನುಭೂತಿ ನೀಡುತ್ತದೆ. ದುಃಖಭರಿತ ಗೀತೆಗಳು ಅಥವಾ ಸಂತೋಷದ ಗೀತೆಗಳು ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸುತ್ತವೆ ಎಂದರೆ ತಪ್ಪಿಲ್ಲ.
ಸಂಗೀತವು ನಾವು ಯಾರು, ನಾವು ಏನನ್ನು ಭಾವಿಸುತ್ತೇವೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮವಾಗಿದೆ. ಇದು ನಮ್ಮ ಒಂಟಿತನವನ್ನು ಕಡಿಮೆ ಮಾಡಲು ಮತ್ತು ಏಕಾಂತ ಅನುಭವಿಸಲು ಸಹಕರಿಸುತ್ತದೆ.
ಸಂಗೀತವು ನಮ್ಮ ಸೃಜನಾತ್ಮಕತೆಯನ್ನು ಹೆಚ್ಚಿಸುವುದರ ಜತೆಗೆ ಸ್ವಲ್ಪ ಸಮಯ ನಮ್ಮ ಸಮಸ್ಯೆಗಳಿಂದ ದೂರವಿದ್ದು, ಕಲ್ಪನಾತ್ಮಕ ಜಗತ್ತನ್ನು ಸೃಷ್ಟಿಸಿ ಖುಷಿಪಡಿಸುವಂತೆ ಮಾಡುತ್ತದೆ. ಸಂಗೀತ ಆಲಿಸುವದರಿಂದ ನಿರಾತಂಕತೆ ಮತ್ತು ನೆಮ್ಮದಿಯನ್ನು ಪಡೆಯಬಹುದು.
ಸಂಗೀತದಿಂದ ಏನೆಲ್ಲ ಸಾಧ್ಯ
ನಿಮ್ಮ ಹೃದಯವನ್ನು ಸ್ಪರ್ಶಿಸುವಂತಹ ಆಧುನಿಕ ಅಥವಾ ಸಾಂಪ್ರದಾಯಿಕ ಗೀತೆಗಳನ್ನು ಆರಿಸಿಕೊಳ್ಳುವುದರಿಂದ ತಾನು ಒಂಟಿತನದಲ್ಲಿ ಅನುಭವಿಸುತ್ತಿರುವ ವ್ಯಕ್ತಿಯ ಕಥೆಯನ್ನು ವಿವರಿಸುವಂತೆ ಭಾಸವಾಗುತ್ತದೆ. ಇದು ಮತ್ತಷ್ಟು ಪ್ರಭಾವ ಬೀರುತ್ತದೆ. ಅದೇ ರೀತಿ ತಾವು ವ್ಯಕ್ತಪಡಿಸಲು ಬಯಸುವ ಭಾವನೆಗಳನ್ನು ಗೀತೆಯಲ್ಲಿ ಬರೆದು, ಸ್ವರಗಳಲ್ಲಿ ಚಿತ್ರೀಕರಿಸುವುದು ಕೂಡ ಉತ್ತಮ ಹವ್ಯಾಸವಾಗಿದೆ. ಈ ಪ್ರಕ್ರಿಯೆಯು ಒಂದು ರೀತಿಯ ಮನೋ ಉಲ್ಲಾಸವನ್ನು ನೀಡುತ್ತದೆ. ಧ್ಯಾನಗೀತಗಳು ಅಥವಾ ಶಾಂತಿದಾಯಕ ಸಂಗೀತವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತದೆ. ಧ್ಯಾನ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು.
ಒಂಟಿತನದ ಗುಟ್ಟು ಸಂಗೀತದಲ್ಲಿದೆ ಹಾಗೆಯೇ ಸಂಗೀತ ಎಂಬುದು ನಮ್ಮ ಭಾವನೆಗಳನ್ನು ಸಮರ್ಥವಾಗಿ ಹಂಚಿಕೊಳ್ಳುವ ಮತ್ತು ಪರಿಹರಿಸುವ ಒಂದು ಮಾರ್ಗವಾಗಿದೆ. ಸಂಗೀತದ ಮೂಲಕ ನಾವು ನಮ್ಮ ಒಂಟಿತನವನ್ನು ಮರೆಯಲು ಮತ್ತು ಜೀವನದಲ್ಲಿ ಹೊಸ ಹುರುಪವನ್ನು ತರಲು ಸಾಧ್ಯವಿದೆ. ಒಂಟಿತನವೆಂದು ನಮ್ಮ ಆತ್ಮಸ್ಥೆçರ್ಯ ಕುಗ್ಗಿಸಿಕೊಳ್ಳದೆ ಬಂದ ಕಷ್ಟಗಳನ್ನು ಎದುರಿಸಿ ಮುನ್ನಡೆದು ಗುರಿಯೆಡೆಗೆ ಸಾಗುವುದೇ ಜೀವನ.
-ವಿಜಿತಾ ಅಮೀನ್
ಬಂಟ್ವಾಳ