Advertisement
ಎಲ್ಲ ಶಾಲೆಗಳಂತೆಯೇ, ನಮ್ಮ ಶಾಲೆಯಲ್ಲಿ ಕೂಡ ತುಂಬಾ ಸ್ಪರ್ಧೆಗಳು, ಚಟುವಟಿಕೆಗಳು ನಮಗಾಗಿ ನಡೆಸಲಾಗುತಿತ್ತು. ಅದರಲ್ಲೆಲ್ಲಾ ಭಾಗವಹಿಸುವ ಹುಮ್ಮಸ್ಸು ನನಗೆ. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವುದು ಎಂದರೆ ನನಗೆ ಬಹಳ ಇಷ್ಟ. ಅಂದು, ಅನಾಥ ಬದುಕು ಎಂಬ ವಿಷಯದ ಮೇಲೆ ನಾನು ಮಾಡಿದ ಭಾಷಣ ಎಲ್ಲರ ಮನ ಮುಟ್ಟಿತ್ತು. ಏನು ಅಂತ ನಿಮಗೂ ಕುತೂಹಲ ಇದೆ ಅಲ್ವಾ?
Related Articles
Advertisement
ಈ ವರ್ಚುವಲ್ ಪ್ರಪಂಚದಲ್ಲಿ ಬದುಕನ್ನು ಆಸ್ವಾದಿಸುವ ಕಲೆಯನ್ನು ಮರೆತ ನಾವು, ಈ ನೆಲ- ಜಲ, ಗಿಡ – ಮರ, ಪ್ರಾಣಿ – ಪಕ್ಷಿಗಳು, ಮನುಷ್ಯನ ಪರಿಚಯವನ್ನೇ ಮರೆತಂತಾಗಿದೆ. ಅಲ್ಲವೆ?
ಇನ್ಸ್ಟಾಗ್ರಾಮ್, ಫೇಸ್ಬುಕ್ ಹೀಗೆ ಹತ್ತು ಹಲವು ಸಾಮಾಜಿಕ ಜಾಲತಾಣಗಳಲ್ಲಿ, ನೂರಾರು, ಸಾವಿರಾರು ಅಪರಿಚಿತ ಸ್ನೇಹಿತರೊಂದಿಗೆ ಮಾತನಾಡಲು ನಮಗೆ ಸಮಯವಿದೆ. ಆದರೇ ನಮ್ಮ ನಡುವಿರುವ ನಿಜವಾದ ಸಂಬಂಧಗಳಿಗೆ ಬೆಲೆ ಕೊಡುವಷ್ಟು ಸಮಯ ಇಲ್ಲದೇ ಹೋಗಿದೆ. ಈಗ ನನಗೆ ಕಾಡುವ ಒಂದು ಪ್ರಶ್ನೆ ಏನೆಂದರೆ ಅನಾಥರು ಯಾರಿರಬಹುದು?
ಇದನೆಲ್ಲ ನೋಡಿ ನನಗೆ ಅನಾಥ ಪದದ ನಿಜವಾದ ಅರ್ಥ ತಿಳಿಯಿತು. ನಾನು ಅನಾಥಾಶ್ರಮದಲ್ಲಿ ಹುಟ್ಟಿ ಬೆಳೆದರೂ, ನಿಜವಾದ ಅನಾಥರು ಯಾರು ಗೊತ್ತಾ? ಎಲ್ಲದೂ ಇದ್ದು, ಎಲ್ಲರೊಂದಿಗೆ ಇದ್ದು ಸಹ ಒಬ್ಬಂಟಿ ಆಗಿ ಇರುವವನೇ ನಿಜವಾದ ಅನಾಥ.
ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಾ ಇರುವಾಗ ಬದಲಾವಣೆಗಳು ಸಹಜ. ಆದರೆ ಭಾರತ, ನಂಬಿಕೆಯ ಬುನಾದಿಯ ಅಡಿಯಲ್ಲಿ ಬೆಳೆದು ಬಂದ, ಅತ್ಯಂತ ಸುಸಂಸ್ಕೃತವಾದ, ಶ್ರೀಮಂತ ರಾಷ್ಟ್ರ.
ಎಷ್ಟೇ ದಾಪುಗಾಲು ಹಾಕಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತ, ನಾವು ಮುಂದೆ ಸಾಗಿದರೂ, ನಮ್ಮ ತನವನ್ನು ಬಿಟ್ಟು, ಸಂಬಂಧ, ಭಾವನೆಗಳಿಗೆ, ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿಗೆ ಗೌರವ ಕೊಡದೇ ಇರುವಾಗ ಇದೆಲ್ಲಾ ಶೂನ್ಯಕ್ಕೆ ಸಮಾನವಲ್ಲವೇ? ಒಂದು ಸಮಾಜದ ಅಡಿಪಾಯ ಕೂಡು ಕುಟುಂಬದ ಮೇಲೆ ನಿಂತಿದೆ ಅಂದ್ರೆ ನೀವು ನಂಬುವಿರಾ? ಎಷ್ಟೆಲ್ಲಾ ಕಲಿತು, ಎಲ್ಲ ಗೊತ್ತಿದ್ದು ಮೂಢರಂತೆ ವರ್ತಿಸುವ ನಮಗೆ ಏನೆಂದು ಹೇಳಬೇಕು? ನಾವು ಎತ್ತಕಡೆ ಸಾಗುತ್ತಿದ್ದೇವೆ, ಅದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನಾವೆಲ್ಲಾ ಇಂದು ಯೋಚಿಸಲೇಬೇಕಾಗಿದೆ.
ಈಗ ಹೇಳಿ ಯಾರು ಅನಾಥರು? ಈಗ ಹೇಳಿ ನಿಜವಾದ ಅನಾಥ ನಾನಾ? ಅವರಾ?
ಯಜುಷಾ
ಸಂತ ಆ್ಯಗ್ನೆಸ್ ಕಾಲೇಜು ಮಂಗಳೂರು