Advertisement
ಸೆರಿಫ್ ಮತ್ತು ಸ್ಯಾನ್ಸ್ -ಸೆರಿಫ್ ಎಂಬ ಮೂಲ ವರ್ಗೀಕರಣದಲ್ಲಿ ಬಹುಪಾಲು ಫಾಂಟ್‌ಗಳು ಲಭ್ಯವಿದೆ. ಇನ್ನೂ ಆಕರ್ಷಕವಾದ ಇತರ ಅಕ್ಷರಗಳನ್ನು ನಾವು ನೋಡಬಹುದು. ಇವುಗಳಲ್ಲಿ ಸ್ಕ್ರಿಪ್ಟ್ ಫಾಂಟ್‌ಗಳು ಕೈಬರಹದ ನೋಟವನ್ನು ಅನುಕರಿಸುತ್ತವೆ. ಉದಾಹರಣೆಗಳಲ್ಲಿ ಕ್ಯಾಲಿಗ್ರಾಫಿಯಾ, ಪೆಸಿಫಿಕೊ ಫಾಂಟ್‌ಗಳು. ರಾಕ್ವೆಲ್ ಎಂಬುದು ಸ್ಲ್ಯಾಬ್ ಸೆರಿಫ್ ಫಾಂಟ್. ಈ ವರ್ಗದ ಅಕ್ಷರಗಳು ದಪ್ಪ, ಬ್ಲಾಕ್ ಸೆರಿಫ್ಗಳನ್ನು ಹೊಂದಿವೆ. ಇನ್ನೊಂದು ಪ್ರವರ್ಗ ಮೊನೊಸ್ಪೇಸ್ ಫಾಂಟ್‌ಗಳು. ಆಕಾರವನ್ನು ಲೆಕ್ಕಿಸದೆ ಒಂದೇ ಅಗಲವಿರುವ ಅಕ್ಷರಗಳನ್ನು ಮೊನೊಸ್ಪೇಸ್ ಫಾಂಟ್‌ಗಳು ಹೊಂದಿವೆ.
Related Articles
Advertisement
ಅದರ ಅನಂತರ, ಸುಮಾರು ಎರಡು ದಶಕಗಳ ಕಾಲ ಮೈಕ್ರೋಸಾಫ್ಟ್ ಆಫೀಸ್ ಅನ್ನು ಅಲಂಕರಿಸಿದ ಸ್ಯಾನ್ಸ್-ಸೆರಿಫ್ ಫಾಂಟ್ ಕ್ಯಾಲಿಬ್ರಿ ಇತ್ತೀಚೆಗೆ ಡೀಫಾಲ್ಟ್ ಸ್ಥಾನದಿಂದ ಕೆಳಗಿಳಿದಿದೆ. ಸ್ಯಾನ್ಸ್ ಸೆರಿಫ್ ಎಂಬುದು ಅಕ್ಷರಗಳ ಸ್ಟ್ರೋಕ್ ಕೊನೆಯಲ್ಲಿ ಸೆರಿಫ್ಗಳು ಅಥವಾ ಸಣ್ಣ ರೇಖೆಗಳು ಅಥವಾ ಬಾಲಗಳನ್ನು ಹೊಂದಿರದ ಒಂದು ರೀತಿಯ ಫಾಂಟ್ ಆಗಿದೆ. ಎಲ್ಲಕಡೆ ಬಳಕೆಯಲ್ಲಿರುವ ಟೈಮ್ಸ್ ನ್ಯೂ ರೋಮನ್ ಸೆರಿಫ್ ಫಾಂಟ್ ಆಗಿದೆ.
ಹದಿನೇಳು ವರ್ಷಗಳಲ್ಲಿ ಕ್ಯಾಲಿಬ್ರಿ ಮೈಕ್ರೋಸಾಫ್ಟ್ಗೆ ಒಂದು ಆಧುನಿಕ ಸ್ಪರ್ಶವನ್ನು ತಂದಿತ್ತು. ಹಿಂದೆ ಡೀಫಾಲ್ಟ್ ಆಗಿದ್ದ-ವರ್ಡ್‌ನಲ್ಲಿ ಟೈಮ್ಸ್ ನ್ಯೂ ರೋಮನ್ ಮತ್ತು ಇತರ ಆಫೀಸ್ ಅಪ್ಲಿಕೇಶನ್‌ಗಳಲ್ಲಿ ಎರಿಯಲ್ ಅನ್ನು ಬದಲಿಸಿತು. ಕ್ಯಾಲಿಬ್ರಿಯ ಆಕರ್ಷಣೆಯು ಅದರ ಶುದ್ಧ, ಸಾಂಪ್ರದಾಯಿಕ ವಿನ್ಯಾಸದಿಂದಲೇ ಹುಟ್ಟಿಕೊಂಡಿತು. ಕೈಬರಹದಿಂದ ಪ್ರಭಾವಿತವಾದ ಅದರ ಸೂಕ್ಷ್ಮ ವೃತ್ತಾಕಾರದ ಅಂಚುಗಳು ಮತ್ತು ನೈಜ -ಟ್ರೂ ಇಟಾಲಿಕ್ ಶೈಲಿಯು ಬಿಗುವಲ್ಲದ ಮತ್ತು ಸರಾಗವಾಗಿ ಓದಬಹುದಾದ ಸೌಂದರ್ಯವನ್ನು ನೀಡಿತು.
ಕ್ಯಾಲಿಬ್ರಿ ವ್ಯಾಪಕ ಶ್ರೇಣಿಯ ಭಾಷೆಗಳನ್ನು ಬೆಂಬಲಿಸಿದ ಫಾಂಟ್. ಇದರ ಬಹುಮುಖ ಬಳಕೆ, ಸ್ಪಷ್ಟತೆ ಮತ್ತು ಆಧುನಿಕತೆಯ ಟಚ್ ಕ್ಯಾಲಿಬ್ರಿಯ ಬಲವಾದರೆ, ಡೀಫಾಲ್ಟ್ ಆಗಿದ್ದ ಕಾರಣದಿಂದ ಅತಿಯಾದ ಬಳಕೆಗೆ ಗುರಿಯಾಗಿ, ವೈಶಿಷ್ಟ್ಯತೆಯನ್ನು ಕಳೆದುಕೊಂಡಿತು. ಇದು ಎಷ್ಟೋ ಕಡೆ ಪ್ರಾಸಂಗಿಕವಾಗಿ ಫಾರ್ಮಲ್ ಅಲ್ಲದ ಸ್ಪರ್ಶವನ್ನೂ ಕೊಟ್ಟಿತು. ಪಿಕ್ಸೆಲ್ ಪಫೆìಕ್ಟ್ ಲೇಔಟ್‌ಗಳಿಗೆ ಸ್ವಲ್ಪ ತಾಂತ್ರಿಕ ಕಿರಿಕಿರಿಯನ್ನೂ ಕ್ಯಾಲಿಬ್ರಿ ನೀಡಿದ್ದಿದೆ. ಕ್ಯಾಲಿಬ್ರಿ ಇನ್ನು ಮುಂದೆ ಮೈಕ್ರೋಸಾಫ್ಟ್ ಆಫೀಸ್ ಫಾಂಟ್‌ಗಳ ರಾಜನಲ್ಲದಿದ್ದರೂ, ಇದು ಬಳಕೆದಾರರ ಜನಪ್ರಿಯ ಆಯ್ಕೆಯಾಗಿ ಉಳಿಯುವ ಸಾಧ್ಯತೆಯಿದೆ.
ಡಿಜಿಟಲ್ ಯುಗದಲ್ಲಿ ನಾವು ಫಾಂಟ್‌ಗಳನ್ನು ನೋಡುವ ವಿಧಾನವನ್ನು ಬದಲಿಸುವಲ್ಲಿ ಕ್ಯಾಲಿಬ್ರಿ ಪರಂಪರೆಯನ್ನು ಹುಟ್ಟುಹಾಕಿದೆ. ಕ್ಯಾಲಿಬ್ರಿ ಎಂಬ ಸ್ಯಾನ್ಸ್-ಸೆರಿಫ್ ಫಾಂಟ್ ನವೀನ ಮತ್ತು ಪ್ರೊಫೆಷನಲ್ ಆಗಿರಬಹುದಾದ ಶೈಲಿ ಎಂದು ಸಾಬೀತುಪಡಿಸಿತು, ಈ ಶೈಲಿಯ ವ್ಯಾಪಕ ಸ್ವೀಕಾರಕ್ಕೆ ದಾರಿ ಮಾಡಿಕೊಟ್ಟಿತು. ಕ್ಯಾಲಿಬ್ರಿ ಇನ್ನು ಮುಂದೆ ಡೀಫಾಲ್ಟ್ ಆಗಿರದಿದ್ದರೂ, ಬಳಕೆದಾರರಿಗೆ ಅದರ ಶುದ್ಧ ವಿನ್ಯಾಸ ಮುಂದೂ ಲಭ್ಯವಿರುತ್ತದೆ. ಎಷ್ಟಾದರೂ ವಿಶ್ವಾಸಾರ್ಹತೆಯನ್ನು ಬೆಳೆಸಲು ಹದಿನೇಳು ವರ್ಷಗಳು ಸುದೀರ್ಘ ಸಮಯ. ಈಗ ಮೈಕ್ರೋಸಾಫ್ಟ್ ಅನ್ನು ಅಲಂಕರಿಸಿರುವ ಡೀಫಾಲ್ಟ್ ಫಾಂಟ್ ಆಪ್ಟೋಸ್.
-ವಿಶ್ವನಾಥ ಭಟ್
ಧಾರವಾಡ