Advertisement
2000 ಮತ್ತು 2001ರ ಚಾಂಪಿಯನ್ ಆಗಿರುವ ವೀನಸ್ ವಿಲಿಯಮ್ಸ್ “ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ತವರಿನ ಕೂಟದ 100ನೇ ಪಂದ್ಯ ಆಡಲಿಳಿದಿದ್ದರು. ಎದುರಾಳಿ ಬೆಲ್ಜಿಯಂನ ಅರ್ಹತಾ ಆಟಗಾರ್ತಿ ಗ್ರೀಟ್ ಮಿನ್ನೆನ್. ಇವರು 6-1, 6-1 ಅಂತರದಿಂದ ವೀನಸ್ ಅವರನ್ನು ಬಗ್ಗುಬಡಿದರು. ಇಲ್ಲಿ ಆಡಲಾದ ಮೊದಲ ಸುತ್ತಿನ 22 ಪಂದ್ಯಗಳಲ್ಲಿ ವೀನಸ್ ಅನುಭವಿಸಿದ ಮೊದಲ ಸೋಲು ಇದಾಗಿದೆ. 26 ವರ್ಷದ ಗ್ರೀಟ್ ಮಿನ್ನೆನ್ ಕುರಿತು ಹೇಳುವುದಾದರೆ, ವೀನಸ್ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ ಮೊದಲ ಸಲ ಫೈನಲ್ ತಲುಪಿದ ವೇಳೆ (1997) ಮಿನ್ನೆನ್ ಕೇವಲ ಒಂದು ತಿಂಗಳ ಶಿಶು!
3ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ, ಮಾಜಿ ಫೈನಲಿಸ್ಟ್ ಮ್ಯಾಡಿಸನ್ ಕೀಸ್ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ. ಮಾಂಟ್ರಿಯಲ್ ಪ್ರಶಸ್ತಿ ಗೆದ್ದು ಇಲ್ಲಿ ಆಡಲಿಳಿದ ಪೆಗುಲಾ 6-2, 6-2 ಅಂತರದಿಂದ ಇಟಲಿಯ ಕ್ಯಾಮಿಲಾ ಜಾರ್ಜಿ ಅವರನ್ನು ಮಣಿಸಿದರು, ಕೀಸ್ ನೆದರ್ಲೆಂಡ್ಸ್‌ನ
ಅರಾಂತ್ಸಾ ರುಸ್ ವಿರುದ್ಧ 6-2, 6-4ರಿಂದ ಗೆದ್ದು ಬಂದರು. ಆದರೆ ಫ್ರಾನ್ಸ್‌ನ 7ನೇ ಶ್ರೇಯಾಂಕಿತೆ ಕ್ಯಾರೋಲಿನ್ ಗಾರ್ಸಿಯಾ ಚೀನದ ಅರ್ಹತಾ ಆಟಗಾರ್ತಿ ಯಫಾನ್ ವಾಂಗ್ ವಿರುದ್ಧ 4-6, 1-6 ಅಂತರದ ಆಘಾತಕಾರಿ ಸೋಲನುಭವಿಸಿದರು. ಅಲ್ಕರಾಜ್ ಎದುರಾಳಿ ಗಾಯಾಳು
ಜರ್ಮನ್ ಎದುರಾಳಿ ಡೊಮಿನಿಕ್ ಕೋಫರ್ ಗಾಯಾಳಾದ ಕಾರಣ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಸುಲಭದಲ್ಲಿ ಮೊದಲ ಸುತ್ತು ದಾಟಿದರು. ಕೋಫರ್ ಪಾದದ ನೋವಿಗೊಳಗಾಗಿ ಪಂದ್ಯ ತ್ಯಜಿಸಿದರು. ಆಗ ಅಲ್ಕರಾಜ್ 6-2, 3-2 ಮುನ್ನಡೆಯಲ್ಲಿದ್ದರು. ಇವರ ಮುಂದಿನ ಎದುರಾಳಿ ದಕ್ಷಿಣ ಆಫ್ರಿಕಾ ಲಾಯ್ಡ ಹ್ಯಾರಿಸ್.
Related Articles
Advertisement
ಕಶನೋವ್‌ಗೆ ಆಘಾತಕಳೆದ ವರ್ಷದ ಸೆಮಿಫೈನಲಿಸ್ಟ್ ಕರೆನ್ ಕಶನೋವ್ ಆಘಾತಕಾರಿ ಸೋಲು ದ್ವಿತೀಯ ದಿನದ ಬಿಗ್ ಅಪ್‌ಸೆಟ್ ಎನಿಸಿತು. ಅಮೆರಿಕದ ವೈಲ್ಡ್‌ಕಾರ್ಡ್ ಆಟಗಾರ ಮೈಕಲ್ ಮೋಹ್ 6-2, 6-4, 6-2ರಿಂದ ಈ ಪಂದ್ಯ ಗೆದ್ದರು. ಅಲೆಕ್ಸಾಂಡರ್ ಜ್ವೆರೇವ್, ಕಾಮ್ ನೂರಿ ಮೊದಲ ಸುತ್ತು ದಾಟಿದ ಇತರ ಶ್ರೇಯಾಂಕಿತ ಆಟಗಾರರು.