ವಾಷಿಂಗ್ಟನ್: ಫ್ಲೋರಿಡಾದ ನಾಯಕರಾದ ಮೈಕೆಲ್ ವಾಲ್ಟ್ಜ್ ಅವರನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ. ಜತೆಗೆ ಅಮೆರಿಕ ಸೇನೆಯ ಕರ್ನಲ್ ಒಬ್ಬರನ್ನೂ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಚೀನಾ ಬಗ್ಗೆ ಕಟುವಾದ ನಿಲುವು ಹೊಂದಿರುವ ವಾಲ್ಟ್ಜ್ ಅಮೆರಿಕದ ಇಂಡಿಯನ್ ಕಾಕಸ್‌ನ ಉಪಾಧ್ಯಕರೂ ಆಗಿದ್ದಾರೆ. ಭಾರತ-ಅಮೆರಿಕದ ಸಂಬಂಧಗಳಿಗೆ ಬೆಂಬಲಿಸುತ್ತಾ ಬಂದಿರುವ ವಾಲ್ಟ್ಜ್ ಮುಂದೆಯೂ ಭಾರತ-ಅಮೆರಿಕ ಮೈತ್ರಿ ಮುಂದುವರಿಯಲು ಸಹಕರಿಸುವ ನಿರೀಕ್ಷೆಯಿದೆ.
ಇನ್ನು ಕಟ್ಟಾ ಚೀನಾ ವಿರೋಧಿಯಾಗಿರುವ ಮಾರ್ಕೋ ರುಬಿಯೋ ಅವರನ್ನು ಟ್ರಂಪ್ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಾಗಿ ವರದಿಯಾಗಿದೆ. 2006ರಿಂದ 2008ರವರೆಗೆ ಫ್ಲೋರಿಡಾದ ಸ್ಪೀಕರ್ ಆಗಿ ರುಬಿಯೋ ಕಾರ್ಯನಿರ್ವಹಿಸಿದ್ದಾರೆ.
ಜಿಲ್ ಬೈಡೆನ್ ಆಹ್ವಾನ ನಿರಾಕರಿಸಿದ ಮೆಲಾನಿಯಾ
ಚುನಾವಣೆಯ ಬಳಿಕ ಅಮೆರಿಕದ ಫಸ್ಟ್ ಲೇಡಿ ಆಯೋಜಿಸುವ ಚಹಾಕೂಟದ ಆಹ್ವಾನವನ್ನು ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಮತ್ತೂಮ್ಮೆ ಟ್ರಂಪ್ ದಂಪತಿ ಚಹಾಕೂಟದ ಸಂಪ್ರದಾಯ ಮುರಿದಿದ್ದಾರೆ.