Advertisement
5ನೇ ಪ್ರಕರಣ ವರದಿನಾಲ್ವರು ಭಾರತೀಯ ವಿದ್ಯಾರ್ಥಿಗಳ ಸಾವಿನ ಬೆನ್ನಲ್ಲೇ ಸೋಮವಾರ ಸಂಜೆ ಮತ್ತೋರ್ವ ಭಾರತೀಯ ವಿದ್ಯಾರ್ಥಿ ನಿಗೂಢವಾಗಿ ಮೃತಪಟ್ಟಿದ್ದಾನೆ. ಇಂಡಿಯಾನಾದ ಪಡ್ನೂì ವಿವಿಯಲ್ಲಿ ಡಾಕ್ಟರೇಟ್ ಪದವಿ ವ್ಯಾಸಂಗ ದಲ್ಲಿದ್ದ ಭಾರತೀಯ ಮೂಲದ ಸಮೀರ್ ಕಾಮತ್ (23) ಮೃತ ದುರ್ದೈವಿ. ಸೋಮವಾರ ಸಂಜೆ ಅರಣ್ಯ ಪ್ರದೇಶವೊಂದರಲ್ಲಿ ಶವ ಪತ್ತೆಯಾಗಿದೆ.
ಅಕುಲ್ ಧವನ್: ಹೈಪೋಥ ರ್ಮಿಯಾ ಕಾಯಿಲೆಗೆ ಬಲಿ ಎನ್ನ ಲಾಗಿದೆ, ನಿಖರ ಕಾರಣ ತಿಳಿದಿಲ್ಲ
ನೀಲ್ ಆಚಾರ್ಯ: ಇದಕ್ಕಿದ್ದಂತೆ ನಾಪತ್ತೆ, ಆತನ ತಾಯಿ ದೂರು ನೀಡಿದ ಬಳಿಕ ಶವ ಪತ್ತೆ
ವಿವೇಕ್ ಸೈನಿ: ನಿರ್ವಸಿತ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದು, ಕಾರಣ ತಿಳಿದಿಲ್ಲ
ಶ್ರೇಯಸ್ ರೆಡ್ಡಿ: ನಿಗೂಢ ಹತ್ಯೆ, ದ್ವೇಷ ಕಾರಣ ಅಲ್ಲವೆಂದು ಪೊಲೀಸರ ಸಬೂಬು. ಸಯ್ಯದ್ ಮೇಲೆ ಮಾರಣಾಂತಿಕ ದಾಳಿ
ಹೈದರಾಬಾದ್ ಮೂಲದ ವಿದ್ಯಾರ್ಥಿ ಸಯ್ಯದ್ ಮಜಹೀರ್ ಅಲಿ ಮೇಲೆ ಶಿಕಾಗೋದಲ್ಲಿ ಮಾರಣಾಂತಿಕ ದಾಳಿ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿ, ರಕ್ತ ಬರುವಂತೆ ಥಳಿಸಿ, ಮೊಬೈಲ್ ಕಿತ್ತುಕೊಂಡಿದ್ದಾರೆ.
Related Articles
ಭಾರತೀಯರಿಗೆ ಅಮೆರಿಕದಲ್ಲಿ ಸಿಗುತ್ತಿ ರುವ ಮಾನ್ಯತೆ, ಆಡಳಿತದ ಪ್ರಮುಖ ಸ್ಥಾನಗಳಿಗೆ ಭಾರತೀಯ ಮೂಲದವರ ನೇಮಕ, ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಭಾರತೀಯರ ಪ್ರಾಬಲ್ಯ, ಆರ್ಥಿಕತೆಗೆ ಭಾರತದ ವಿದ್ಯಾರ್ಥಿ ಗಳು, ವೃತ್ತಿಪರರ ಕೊಡುಗೆಗಳೇ ಭಾರತೀಯರ ವಿರುದ್ಧ ದ್ವೇಷಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
Advertisement
ನೆರವಿಗಿದ್ದೇವೆ: ರೆಡ್ಡಿಮಜರ್ ಅಲಿ ಮೇಲಿನ ದಾಳಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಸಚಿವಾಲಯ ಈ ಕುರಿತು ಗಂಭೀರ ಚರ್ಚೆ ನಡೆಸಬೇಕು ಎಂದಿದ್ದಾರೆ. ತೆಲಂಗಾಣ ಮೂಲದ ಯುವಜನರು ವಿಶ್ವದ ಯಾವ ಮೂಲೆಯಲ್ಲಿದ್ದರೂ ಅವರಿಗಾಗಿ ನಮ್ಮ ಸರಕಾರ ಸಹಾಯ ಕೇಂದ್ರ ಸ್ಥಾಪಿಸಲಿದೆ ಎಂದಿದ್ದಾರೆ.