ಕೊಲೊಂಬೋ: ಚೀನಾದ ಹಿಡಿತ ಮತ್ತು ಪ್ರಭಾವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ಉದ್ಯಮಿ ಗೌತಮ್ ಅದಾನಿ ನಿರ್ಮಾಣ ಮಾಡುತ್ತಿರುವ ಬೃಹತ್ ಬಂದರು ಘಟಕಕ್ಕೆ 553 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಅಮೆರಿಕ ತಿಳಿಸಿದೆ.
ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಭಾವವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಮುಂದಾಗಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:Bizarre: ಪೊಲೀಸ್ ವಶದಲ್ಲಿದ್ದ 60 ಮದ್ಯದ ಬಾಟಲಿಯಿಂದ ಮದ್ಯ ಕುಡಿದ ಇಲಿ ಅರೆಸ್ಟ್.!
ಕಳೆದ ವರ್ಷ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಮೊದಲು ಚೀನಾದಿಂದ ಭಾರೀ ಪ್ರಮಾಣದಲ್ಲಿ ಸಾಲ ಪಡೆದಿರುವುದು ಕೊಲಂಬೋಗೆ ಮುಳುವಾಗಿತ್ತು. ಈ ನಿಟ್ಟಿನಲ್ಲಿ ಇದೀಗ ಬೀಜಿಂಗ್ ಹಸ್ತಕ್ಷೇಪಕ್ಕೆ ತಡೆಯೊಡ್ಡಲು ಅಮೆರಿಕ ಮತ್ತು ಭಾರತ ಕೈಜೋಡಿಸಿರುವುದಾಗಿ ವರದಿ ತಿಳಿಸಿದೆ.
ಶ್ರೀಲಂಕಾದಲ್ಲಿ ಅಮೆರಿಕ ಸರ್ಕಾರದ ಏಜೆನ್ಸಿ ಬೃಹತ್ ಪ್ರಮಾಣದ ಡೀಪ್ ವಾಟರ್ ಟರ್ಮಿನಲ್ ನಿರ್ಮಿಸುತ್ತಿದೆ. ಇದೊಂದು ಜಾಗತಿಕವಾಗಿ ಬೃಹತ್ ಯೋಜನೆಯಾಗಿದೆ. ಇದರಿಂದ ಶ್ರೀಲಂಕಾದ ಆರ್ಥಿಕ ಪ್ರಗತಿಗೂ ಅನುಕೂಲವಾಗಲಿದೆ ಎಂದು ಡಿಎಫ್ ಸಿ ಪ್ರಕಟನೆಯಲ್ಲಿ ತಿಳಿಸಿದೆ.
2023ನೇ ಸಾಲಿನಲ್ಲಿ ಡಿಎಫ್ ಸಿ ಶ್ರೀಲಂಕಾದಲ್ಲಿ ಸುಮಾರು 9.3 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಿದೆ. ಇಂಡೋ ಫೆಸಿಪಿಕ್ ಯೋಜನೆಗಳ ಅಭಿವೃದ್ಧಿಗಾಗಿ ಅಮೆರಿಕ ಆರ್ಥಿಕ ನೆರವು ನೀಡಲು ಬದ್ಧವಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷ ಚೀನಾ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 2.2 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಿತ್ತು. ಇದೊಂದು ಬೃಹತ್ ಪ್ರಮಾಣದ ವಿದೇಶಿ ನೇರ ಹೂಡಿಕೆಯಾಗಿತ್ತು ಎಂದು ವರದಿ ತಿಳಿಸಿದೆ.