Advertisement

ಪಾಕಿಸ್ಥಾನಕ್ಕೆ 25.50 ಕೋಟಿ ಡಾಲರ್‌ ನೆರವಿಗೆ ಅಮೆರಿಕ ತಡೆ

12:35 PM Dec 30, 2017 | Team Udayavani |

ನ್ಯೂಯಾರ್ಕ್‌ : ಉಗ್ರ ಜಾಲಗಳ ವಿರುದ್ಧ ಯಾವುದೇ ಕಠಿನ ಕ್ರಮ ಕೈಗೊಳ್ಳದ ಪಾಕಿಸ್ಥಾನದ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಅಮೆರಿಕ ಅದನ್ನು ನೇರವಾಗಿ ಆ ದೇಶಕ್ಕೆ ತಿಳಿಸುವ ಕ್ರಮವಾಗಿ 25.50 ಕೋಟಿ ಡಾಲರ್‌ಗಳ ನೆರವನ್ನು ತಡೆ ಹಿಡಿಯಲು ನಿರ್ಧರಿಸಿದೆ.

Advertisement

ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಹಕ್ಕಾನಿ ಮತ್ತು ತಾಲಿಬಾನ್‌ ಉಗ್ರ ಜಾಲವನ್ನು ನಿಯಂತ್ರಿಸುವ ಇಲ್ಲವೇ ನಿರ್ಮೂಲನ ಮಾಡುವ ಯಾವುದೇ ಕಠಿನ ಕ್ರಮ ಕೈಗೊಳ್ಳದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿರುವುದನ್ನು ಕಾರ್ಯ ರೂಪದಲ್ಲಿ ತೋರಿಸುವ ಅಗತ್ಯವಿದೆ; ಆದುದರಿಂದ ಪಾಕಿಸ್ಥಾನಕ್ಕೆ ಕೊಡಲು ತೀರ್ಮಾನವಾಗಿದ್ದ 25.50 ಕೋಟಿ ಡಾಲರ್‌ ನೆರವನ್ನು ತಡೆ ಹಿಡಿಯಬೇಕು ಎಂಬ ವಿಷಯದಲ್ಲಿ ಟ್ರಂಪ್‌ ಆಡಳಿತೆಯಲ್ಲಿ ಆಂತರಿಕ ಚರ್ಚೆ ನಡೆದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next