Advertisement

JeM ಹಣ, ಆಸ್ತಿಪಾಸ್ತಿ ತ್ವರಿತ ಸ್ತಂಭನ: ಪಾಕಿಗೆ ಅಮೆರಿಕ ಖಡಕ್‌ ಮಾತು

06:33 AM Feb 16, 2019 | udayavani editorial |

ವಾಷಿಂಗ್ಟನ್‌ : ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟಿರುವ ಜೆಇಎಂ ಸಹಿತ ಹಲವು ಉಗ್ರ ಸಂಘಟನೆಗಳು ಮತ್ತು ಅವುಗಳ ನಾಯಕರ ಹಣ, ಆಸ್ತಿಪಾಸ್ತಿ ಇತ್ಯಾದಿಗಳನ್ನು ಪಾಕಿಸ್ಥಾನ ಇನ್ನು ಎಷ್ಟು ಮಾತ್ರಕ್ಕೂ ವಿಳಂಬಿಸದೇ ಕೂಡಲೇ ಸ್ತಂಭನಗೊಳಿಸಬೇಕು ಎಂದು ಅಮೆರಿಕ ಕಟ್ಟುನಿಟ್ಟಾಗಿ ಹೇಳಿದೆ.

Advertisement

ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ  ನಡೆದಿರುವ ಉಗ್ರ ದಾಳಿಯ ಹೊಣೆ ಹೊತ್ತಿರುವ ಪಾಕ್‌ ಮೂಲದ ಜೆಇಎಂ ಉಗ್ರ ಸಂಘಟನೆ ಮಾತ್ರವಲ್ಲದೆ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಇನ್ನೂ ಹಲವು ಉಗ್ರ ಸಮೂಹಗಳ ವಿರುದ್ಧ ಪಾಕಿಸ್ಥಾನ ತಡಮಾಡದೆ ಕಠಿನ ಕ್ರಮತೆಗೆದುಕೊಳ್ಳಬೇಕು ಎಂದು ಅಮೆರಿಕ ಕಠಿನವಾಗಿ ನುಡಿದಿದೆ. 

ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯನ್ನು  ವಿಶ್ವಸಂಸ್ಥೆ  2002ರಲ್ಲೇ ನಿಷೇಧಿಸಿದೆ. ಇದಕ್ಕೂ ಹಿಂದೆ 2001ರ ಡಿಸೆಂಬರ್‌ನಲ್ಲಿ ಅಮೆರಿಕ ಈ ಉಗ್ರ ಸಂಘಟನೆಯನ್ನು ನಿಷೇಧಿಸಿದೆ. ಆದರೂ ಅದು ಪಾಕಿಸ್ಥಾನದಲ್ಲಿ  ಇಂದಿಗೂ ಕಾರ್ಯಾಚರಿಸುತ್ತಿದೆ. ಈ ಉಗ್ರ ಸಂಘಟನೆ ಭವಿಷ್ಯದಲ್ಲಿ ಯಾವುದೇ ಉಗ್ರ ದಾಳಿ ಕೈಗೊಳ್ಳದಂತೆ ಮಾಡುವ ಕ್ರಮಗಳನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಹೇಳಿದ್ದಾರೆ. 

ಜೆಇಎಂ ಮತ್ತು ಇತರ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳುವ ತನ್ನ ಜವಾಬ್ದಾರಿಯನ್ನು ಪಾಕಿಸ್ಥಾನ ಎತ್ತಿಹಿಡಿಯುವುದೆಂದು ನಾವು ನಿರೀಕ್ಷಿಸುತ್ತೇವೆ ಎಂದು ವಕ್ತಾರ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next