Advertisement

ಪೂಜಪ್ಪುರ ಜೈಲಿನಲ್ಲಿ ಹೇರ್‌ಕಟ್‌ ಮಾಡಿಸಿ!

03:45 AM Feb 18, 2017 | Team Udayavani |

ತಿರುವನಂತಪುರ: ಹೇರ್‌ ಕಟ್‌ ಮಾಡ ಬೇಕಿದ್ದರೆ ಈ ಜೈಲಿನ ಸಲೂನ್‌ಗೆ ಭೇಟಿ ಕೊಡಿ. ಏನು ಸ್ವಾಮಿ ಇದು ಎಂದು ಪ್ರಶ್ನೆ ಮಾಡಬೇಡಿ. ತಿರುವನಂತಪುರದಲ್ಲಿರುವ ಪೂಜಪ್ಪುರ ಕೇಂದ್ರೀಯ ಕಾರಾಗೃಹದಲ್ಲಿ ಏಪ್ರಿಲ್‌-ಮೇನಲ್ಲಿ ಪುರುಷರಿಗಾಗಿಯೇ ಇರುವ ವಿಶೇಷ ಸಲೂನ್‌ ಆರಂಭವಾಗಲಿದೆ.ಅದರಲ್ಲಿ ಮುಖ ಕೌÒರ, ಹೇರ್‌ ಕಟ್ಟಿಂಗ್‌, ಫೇಶಿಯಲ್‌, ಪೆಡಿಕ್ಯೂರ್‌, ಮ್ಯಾನಿಕ್ಯೂರ್‌, ಶೇವಿಂಗ್‌, ಸ್ಪಾ ಮುಂತಾದ ಸೇವೆಗಳನ್ನು ಕೈಗೆಟಕುವ ದರದಲ್ಲಿ ನೀಡಲಾಗುತ್ತದೆ. ಅದಕ್ಕಾಗಿ ಜೈಲಿಗೆ ಉಪಯೋಗವಾಗದ ಕಟ್ಟಡವನ್ನು ದುರಸ್ತಿ ಮಾಡಿ ಹವಾನಿಯಂತ್ರಿಕ ಸಲೂನ್‌ ಅನ್ನು ನಿರ್ಮಿಸ ಲಾಗಿದೆ.ಅದಕ್ಕೆ “ಫೀನಿಕ್ಸ್‌ ಫ್ರೀಡಂ ಎಕ್ಸ್‌ ಪ್ರಶನ್ಸ್‌’ ಎಂಬ ಹೆಸರನ್ನು ಇರಿಸಲು ತೀರ್ಮಾನಿಸಲಾಗಿದೆ.

Advertisement

ಕೈದಿಗಳ ಮನಃಪರಿವರ್ತನೆ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಪೂಜಪ್ಪುರ ಕಾರಾಗೃಹಕ್ಕಿದೆ. ಸೆರೆಮನೆವಾಸಿಗಳಿಗೆ  ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆಂದು ಜೈಲು ಸೂಪರಿಂಟೆಂಡೆಂಟ್‌ ಎಸ್‌.ಸಂತೋಷ್‌ ತಿಳಿಸಿದ್ದಾರೆ. ಆರಂಭದಲ್ಲಿ 20-25 ಕೈದಿಗಳಿಗೆ ತರಬೇತಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಅನುಕೂಲ ಆಗುವಂಥ ವಿಭಾಗವನ್ನೂ ತೆರೆಯ ಲಾಗುತ್ತದೆ ಎಂದು ಹೇಳಿದ್ದಾರೆ ಅವರು.

ಸಾರ್ವಜನಿಕರಿಗೂ ಕೂಡ ಈ ಶಾಪ್‌ನ ಸದುಪಯೋಗಪಡೆಯಬಹುದು ಎಂದು ಅವರು ಹೇಳಿದ್ದಾರೆ. ಇಂಥ ತರಬೇತಿಯಿಂದ ಕೈದಿಗಳಿಗೆ ಬಿಡುಗಡೆ ಯಾದ ಬಳಿಕ ಉತ್ತಮ ಜೀವನ  ಸಾಧಿಸಲು ನೆರವಾಗುತ್ತದೆ ಎಂದಿದ್ದಾರೆ. ಕಣ್ಣೂರು ಕಾರಾಗೃಹದಲ್ಲೂ ಇಂಥದ್ದೇ ಮಾದರಿಯ ಸಲೂನ್‌ ಒಂದನ್ನು ಶುರು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next