Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಧ್ಯೆ ಕಾಲುವೆ ಹಾದು ಹೋಗುವುದರಿಂದ ಅರಣ್ಯ ಇಲಾಖೆ 2016ರಲ್ಲಿ ಅನುಮತಿ ನೀಡಿದೆ. ಪರಿಸರ ಸೂಕ್ಷ್ಮ ವಿಚಾರವಾಗಿದ್ದರಿಂದ ವಿಳಂಬವಾಗಿದೆ ಎಂದು ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ರಾಘವನ್ ಮಾಹಿತಿ ನೀಡಿದರು. ಇದರಿಂದ ಸಿಟ್ಟಿಗೆದ್ದ ಸಚಿವರು, ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಗುತ್ತಿಗೆದಾರ ಹಾಜರಾಗದೆ
ವ್ಯವಸ್ಥಾಪಕರನ್ನು ಕಳುಹಿಸಿದ್ದನ್ನು ಕಂಡು ಕೆರಳಿದರಲ್ಲದೆ ಅವರನ್ನು ತಕ್ಷಣ ಹೊರಗೆ ಕಳುಹಿಸಿದರು. ಭದ್ರಾ ಜಲಾಶಯದಿಂದ ವೈ ಜಂಕ್ಷನ್
ವರೆಗಿನ ಕಾಮಗಾರಿ ಮುಗಿದೆ. ಇಲ್ಲಿಂದ ಮುಂದೆ ಚಿತ್ರದುರ್ಗ ಹಾಗೂ ದಾವಣಗೆರೆ ಶಾಖಾ ಕಾಲುವೆ ನಿರ್ಮಾಣದಲ್ಲಿ ತೊಡಕುಗಳಿರುವ ಬಗ್ಗೆ ಪ್ರತಿ ಪ್ಯಾಕೇಜ್‌ನ ಗುತ್ತಿಗೆದಾರರು, ಇಂಜಿನಿಯರ್‌ಗೆ ಬಗ್ಗೆಮಾಹಿತಿ ಪಡೆದ ಸಚಿವರು, ತುಮಕೂರು ಶಾಖಾ ಕಾಲುವೆಯಲ್ಲಿ ಅಮೃತ ಮಹಲ್ ಕಾವಲು ಹಾಗೂ ಅರಣ್ಯ ಭೂಮಿ ಕುರಿತಂತೆ ನ್ಯಾಯಾಲಯದಲ್ಲಿರುವ ಪ್ರಕರಣದ ಕುರಿತು ವಕೀಲರ ಜತೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಕೆಲವೆಡೆ ಕಾಮಗಾರಿ ಬಾಕಿ ಇದ್ದು, ಮಾರ್ಚ್ ವೇಳೆಗೆ ಪೂರ್ಣಗೊಳಿಸಿ ಬಿಟ್ಟುಕೊಡುವುದಾಗಿ ಅಧಿಕಾರಿಗಳು ತಿಳಿಸಿದರು.
Related Articles
Advertisement
ಅಬ್ಬಿನಹೊಳಲು ಗ್ರಾಮದಲ್ಲಿ ಕಾಮಗಾರಿ ಆರಂಭಿಸಿ:ತರೀಕೆರೆ ತಾಲೂಕಿನ ಅಬ್ಬಿನಹೊಳಲು ಗ್ರಾಮದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಿ ಕಾಮಗಾರಿ ಆರಂಭಿಸಿ. ಪರಿಹಾರ ಪಡೆಯದಿದ್ದರೆ ಅವರ ಹೆಸರಿಗೆ ಜಮಾ ಮಾಡಿ ಪೊಲೀಸರ ಸಹಕಾರ ಪಡೆದು ಕೆಲಸ ಮಾಡಿ. ಬರದಿಂದ ಬೇಯುತ್ತಿರುವ ರೈತರಿಗಾಗಿ ಈ ಕ್ರಮ ಅನಿವಾರ್ಯ. ಇದು ದಬ್ಟಾಳಿಕೆ ಅಲ್ಲ ಎಂದು ಸಚಿವರು ಸ್ಪಷ rಪಡಿಸಿದರು. ಭದ್ರತೆ ನೀಡುವಂತೆ ಇದೇ ವೇಳೆ ಸ್ಥಳದಲ್ಲಿದ್ದ ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು. ಚಿಕ್ಕಮಗಳೂರು ಎಎಸ್ಪಿ ರೂಪಾ ಮಾತನಾಡಿ, ಅಬ್ಬಿನಹೊಳಲು ಗ್ರಾಮದಲ್ಲಿ 41 ರೈತರ ಜಮೀನನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಇದರಲ್ಲಿ ಆರು ರೈತರು ಮಾತ್ರ ಪರಿಹಾರ ಪಡೆದಿಲ್ಲ. ಉಪವಿಭಾಗಾ ಧಿಕಾರಿ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದರು. 3500 ಎಕರೆ ಭೂಸ್ವಾಧೀನ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 7,012 ಎಕರೆ ಭೂಮಿಯ ಅಗತ್ಯವಿದ್ದು, ಇದರಲ್ಲಿ 3,500 ಎಕರೆ ಭೂಸ್ವಾಧೀನವಾಗಿದೆ. ಇನ್ನೂ 3,512 ಎಕರೆ ಭೂಸ್ವಾಧೀನಕ್ಕೆ ಬಾಕಿ ಇದೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು. ಈವರೆಗೆ 4,800 ಕೋಟಿ ರೂ. ಅನುದಾನ ಖರ್ಚಾಗಿದೆ. ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ತೊಂದರೆ ಇಲ್ಲ. ರಾಜ್ಯ ಸರ್ಕಾರ ಅನುದಾನವನ್ನು ಉದಾರವಾಗಿ ನೀಡಿದೆ. ಅರಣ್ಯ ಪ್ರದೇಶ ಹೊರತುಪಡಿಸಿಉಳಿದೆಡೆಭೂಸ್ವಾಧೀನಕ್ಕೆಯಾವುದೇ
ತೊಂದರೆ ಇಲ್ಲ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿ ಕಾರಿ ಆರ್. ಚಂದ್ರಯ್ಯ, ಭದ್ರಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ವಿವಿಧ ಇಲಾಖೆಗಳಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ರಾಷ್ಟ್ರೀಯಯೋಜನೆ
ಮಾನ್ಯತೆ ಸನ್ನಿಹಿತ
ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯಯೋಜನೆಯ ಮಾನ್ಯತೆ ಸಿಗುವಕಾಲ ಸನ್ನಿಹಿತವಾಗಿದೆ. ಇದಕ್ಕಾಗಿಹೈಪವರ್‌ಕಮಿಟಿ ರಚನೆ ಆಗಿದೆ. ಅಂತಿಮ ವಾಗಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ. ಮುಂಬರುವ ಜನವರಿ-ಫೆಬ್ರವರಿಯೊಳಗೆ ಭೂಸ್ವಾಧೀನ ಸಮಸ್ಯೆ ಬಗೆಹರಿಯಲಿದೆ. ಭದ್ರಾ ಮೇಲ್ದಂಡೆ ಯೋಜನೆಕಾಮಗಾರಿಗೆ ಈವರೆಗೆ 4800 ಕೋಟಿ ರೂ.ಖರ್ಚಾಗಿದ್ದು, ಭೂಸ್ವಾಧೀನಕ್ಕೆ ಅನುದಾನದ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.