Advertisement

Deepavali: ಅರಣ್ಯವಾಸಿಗಳ ಜತೆಗೆ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ದೀಪಾವಳಿ

11:18 PM Nov 12, 2023 | Team Udayavani |

ಗೋರಖ್‌ಪುರ/ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದಲ್ಲಿ ಅರಣ್ಯವಾಸಿಗಳ ಜತೆಗೆ ಬೆಳಕಿನ ಹಬ್ಬ, ದೀಪಾವಳಿ ಆಚರಿಸಿಕೊಂಡಿದ್ದಾರೆ. ಇದಲ್ಲದೆ ಗೋರಖ್‌ಪುರ ಜಿಲ್ಲೆಗೆ ಸಂಬಂಧಿಸಿದಂತೆ ಇರುವ 153 ಕೋಟಿ ರೂ. ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹದಿನೈದು ವರ್ಷಗಳಿಂದ ಅರಣ್ಯವಾಸಿಗಳ ಜತೆಗೆ ಹಬ್ಬ ಆಚರಿಸುತ್ತಿರುವ ಉತ್ತರ ಪ್ರದೇಶ ಸಿಎಂ “ಸಮುದಾಯದವರಿಗೆ ಅತ್ಯುತ್ತಮ ಮನೆ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಅವರೆಲ್ಲರೂ ಉತ್ತಮ ಮನೆಗಳಲ್ಲಿ ವಾಸಿಸುತ್ತಿರುವುದು ಸಂತೋಷ ತಂದಿದೆ’ ಎಂದರು.

Advertisement

500 ವರ್ಷಗಳ ಕಾಲ ಮಂದಿರ ನಿರ್ಮಾಣಕ್ಕಾಗಿ ಕಾದಿರುವ ಹಿನ್ನೆಲೆಯಲ್ಲಿ ಜನರು 5 ದೀಪಗಳನ್ನು ತಮ್ಮ ಮನೆಯಲ್ಲಿ ಹಚ್ಚಬೇಕು ಎಂದು ಒತ್ತಾಯಿಸಿದರು.

ಅದಕ್ಕೂ ಮೊದಲು ಅಯೋಧ್ಯೆಯಲ್ಲಿ ತಾತ್ಕಾಲಿಕ ಮಂದಿರದಲ್ಲಿ ಇರುವ ರಾಮ ಲಲ್ಲಾನಿಗೆ ಸಿಎಂ ಪೂಜೆ ಸಲ್ಲಿಸಿದ್ದರು. ಜತೆಗೆ 54 ದೇಶಗಳ 88 ರಾಜತಾಂತ್ರಿಕ ಅಧಿಕಾರಿಗಳು ಶನಿವಾರ ನಡೆದಿದ್ದ ದೀಪೋತ್ಸವದಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next