Advertisement

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

01:21 AM Dec 23, 2024 | Team Udayavani |

ಸಂಭಲ್‌: 46 ವರ್ಷಗಳ ಬಳಿಕ ತೆರೆಯ ಲಾದ ಉತ್ತರ ಪ್ರದೇಶದ ಸಂಭಲ್‌ನ ಚಂದೌಶಿ ಪ್ರದೇಶದ ಶಿವ-ಹನುಮಾನ ದೇಗುಲದಲ್ಲಿ ಕೈಗೊಳ್ಳಲಾದ ಉತ್ಖನನ ದಲ್ಲಿ 150 ವರ್ಷಗಳ ಹಳೆಯ ಮೆಟ್ಟಿಲು ಗಳ ಬಾವಿಯೊಂದು ಪತ್ತೆಯಾಗಿದೆ. ಶನಿ ವಾರ ಪತ್ತೆಯಾದ ಸುರಂಗವು ಹತ್ತಿರದ ಬಂಕೆ ಬಿಹಾರಿ ದೇಗುಲಕ್ಕೆ ಸಂಪರ್ಕ ಹೊಂದಿ ರಬಹುದೆಂದು ಭಾವಿಸಲಾಗಿದೆ.

Advertisement

ಪ್ರಾಚೀನ ಬಾವಿಯು ಸುಮಾರು 400 ಚದರ ಮೀಟ ರ್‌ನಲ್ಲಿ ಹರಡಿಕೊಂಡಿದ್ದು, ಒಟ್ಟು 4 ಚೇಂಬರ್‌ಗಳಿವೆ. ಬಾವಿಯ ಮಹಡಿಗಳನ್ನು ಮಾರ್ಬಲ್‌ ಮತ್ತು ಇಟ್ಟಿಗೆಗಳಿಂದ ಮಾಡ ಲಾಗಿದೆ ಎಂದು ಸಂಭಲ್‌ ಜಿಲ್ಲಾಧಿ ಕಾರಿ ರಾಜೇಂದ್ರ ಅವರು ತಿಳಿಸಿ ದ್ದಾರೆ. ಸ್ಥಳೀಯ ರಾಜವಂಶಸ್ಥರು ಆಡಳಿತ ನಡೆಸಿದ್ದ ವೇಳೆ ಅದರ ನಿರ್ಮಾಣ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ಥಳೀಯರ ಪ್ರಕಾರ ಇದು 1857ರ ಸ್ವಾತಂತ್ರ್ಯದ ವೇಳೆ ನಿರ್ಮಾಣವಾಗಿದೆ. ಈ ಪ್ರದೇಶದ ಕೆಲವು ಭಾಗಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದ್ದು, ಅದನ್ನು ತೆರವು ಗೊ ಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next