Advertisement

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

11:49 AM Dec 20, 2024 | Team Udayavani |

ಹುಣಸೂರು: ಒಂದೆಡೆ ಜಾನುವಾರುಗಳನ್ನು ಕಾಡುತ್ತಿದ್ದ ಚಿರತೆಯನ್ನು ಬೋನಿನಲ್ಲಿ ಬಂಧಿಯಾಗಿಸಿದ್ದರೆ, ಮತ್ತೊಂದೆಡೆ ಕಾರು ಡಿಕ್ಕಿಯಾಗಿ ಚಿರತೆಯೊಂದು ಗಾಯಗೊಂಡಿರುವ ಘಟನೆ ಡಿ.20ರ ಶುಕ್ರವಾರ ಹುಣಸೂರು ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ ಗಾವಡಗೆರೆ ಸುತ್ತಮುತ್ತಲಿನಲ್ಲಿ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ಕೊಂದು ತಿಂದು ಹಾಕಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಸುಮಾರು 9 ವರ್ಷದ ಚಿರತೆ ಕೊನೆಗೂ ಸಣ್ಣಸ್ವಾಮಿ ನಾಯಕರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಬಂಧಿಯಾಗಿದೆ.

ಚಿರತೆಗೆ ಗಾಯ:

ಮೈಸೂರು-ಹುಣಸೂರು ಹೆದ್ದಾರಿಯ ಅಂಕನಹಳ್ಳಿ ಗೇಟ್ ಬಳಿ ಡಿ.19 ಗುರುವಾರ ರಾತ್ರಿ ಹೆದ್ದಾರಿ ದಾಟುತ್ತಿದ್ದ ಚಿರತೆಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಗಾಯಗೊಂಡ ಚಿರತೆ ಕೆಲಹೊತ್ತು ರಸ್ತೆಯಲ್ಲೇ ಮಲಗಿತ್ತು. ನಂತರ ಸಾವರಿಸಿಕೊಂಡು ಮತ್ತೆ ಜಮೀನು ಕಡೆ ಓಡಿ ಹೋಗಿದೆ.

ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನವನದ ಮೇಟಿಕುಪ್ಪೆ ಕಡೆ ಬಂಧ-ಮುಕ್ತಗೊಳಿಸಲಾಗುವುದೆಂದು ಆರ್.ಎಫ್.ಒ. ನಂದಕುಮಾರ್ ತಿಳಿಸಿದರು.

Advertisement

ಚಿಪ್ ಅಳವಡಿಕೆಗೆ  ಚಿಂತನೆ:

ಸೆರೆ ಸಿಕ್ಕಿರುವ ಚಿರತೆಗೆ ಮೈಕ್ರೋ ಚಿಪ್ ಅಳವಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಮಹಮದ್ ಪೈಯಾಜ್ ಉದ್ದೀನ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next