Advertisement

ಕ್ರೀಡಾಂಗಣ-ಉದ್ಯಾನವನಕ್ಕೆ ಒತ್ತಾಯ ವಸ್ತು ಪ್ರದರ್ಶನದಿಂದ ಪ್ರತಿಭೆ ಅನಾವರಣ

12:58 PM Mar 17, 2022 | Team Udayavani |

ವಾಡಿ: ಪಟ್ಟಣದ ಜನತೆಗಾಗಿ ಸಾರ್ವಜನಿಕ ಉದ್ಯಾನವನ ಮತ್ತು ಯುವಕರಿಗಾಗಿ ಕ್ರೀಡಾಂಗಣ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬೆಳಗಿನ ಬಳಗದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಪಟ್ಟಣದಲ್ಲಿ ಐವತ್ತು ಸಾವಿರ ಜನಸಂಖ್ಯೆಯಿದೆ. ವಿಶ್ವವಿಖ್ಯಾತ ಸಿಮೆಂಟ್‌ ಕಾರ್ಖಾನೆ ಹಾಗೂ ಜಂಕ್ಷನ್‌ ರೈಲು ನಿಲ್ದಾಣವಿದೆ. ಹದಿನೈದು ಪ್ರಾಥಮಿಕ, ಹನ್ನೊಂದು ಪ್ರೌಢ ಶಾಲೆಗಳಿದ್ದು ಸಾವಿರಾರು ಸಂಖ್ಯೆಯಲ್ಲಿ ಯುವಜನರಿದ್ದಾರೆ. ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿರುವ ನಗರದಲ್ಲಿ ಕ್ರೀಡಾ ಸ್ಫೂರ್ತಿಗಾಗಿ ಸೌಲಭ್ಯಗಳು ಮರೀಚಿಕೆಯಾಗಿವೆ.

ವಿದ್ಯಾರ್ಥಿಗಳು, ಯುವಜನರು ಆಟದ ಮೈದಾನದ ಕೊರತೆ ಎದುರಿಸುತ್ತಿದ್ದಾರೆ. ಪುರಸಭೆ ಆಡಳಿತ ಕೇಂದ್ರಸ್ಥಾನದಲ್ಲಿ ವಯಸ್ಕರಿಗಾಗಿ, ಮಕ್ಕಳಿಗಾಗಿ ಸಾರ್ವಜನಿಕ ಉದ್ಯಾನವನ ಸೌಲಭ್ಯ ಒದಗಿಸದಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ದೂರಿದ್ದಾರೆ.ನಗರದ ವಿವಿಧ ಬಡಾವಣೆಗಳ ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಳಗಿನ ಬಳಗದ ಸದಸ್ಯರಾದ ಕಾಶೀನಾಥ ಶೆಟಗಾರ, ಪ್ರಕಾಶ ಚಂದನಕೇರಿ, ರಾಜು ಒಡೆಯರಾಜ, ನಾಗರಾಜ ಗೌಡಪ್ಪನೋರ, ಸತೀಶ ಸಾವಳಗಿ, ರವಿ ರದ್ದೇವಾಡಗಿ, ವೀರಣ್ಣ ಯಾರಿ, ಹಿರಿಯರಾದ ವಿ.ಕೆ. ಕೇದಿಲಾಯ, ಭೀಮರಾವ ದೊರೆ, ಸಾಂತಪ್ಪ ಸಾಹು ಅಳ್ಳೊಳ್ಳಿ, ಜಯದೇವಸ್ವಾಮಿ ಜೋಗಿಕಲ್ಮಠ, ಮಲ್ಲಿಕಾರ್ಜುನ ಕರಗರ, ಲಕ್ಷ್ಮೀಕಾಂತ ಬಿರಾದಾರ, ಅಶೋಕ ಖಾನಕುರ್ತೆ ನಿಯೋಗದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next