Advertisement

ಕಣ್ಣಿಗೆ ಕಾಣದ ಆದಾಯವೇ ಸಂತೃಪ್ತಿ: ಲಾವಣ್ಯ

11:16 AM Nov 12, 2018 | |

ಕಲಬುರಗಿ: ಆದಾಯಗಳಲ್ಲಿ ಎರಡು ತರಹದ್ದು. ಒಂದು ಕಣ್ಣಿಗೆ ಕಾಣುವುದಾಗಿದ್ದರೆ ಮತ್ತೂಂದು ಕಣ್ಣಿಗೆ ಕಾಣದ್ದಾಗಿದೆ. ಆದರೆ
ಕಣ್ಣಿಗೆ ಕಾಣದ ಆದಾಯವೇ ಪ್ರೀತಿ, ಶಾಂತಿ ಹಾಗೂ ಸಂತೃಪ್ತಿ ಕೊಡುತ್ತದೆ ಎಂದು ಗುಜರಾತ್‌ನ ಖ್ಯಾತ ಮನೋರೋಗ ತಜ್ಞೆ
ಲಾವಣ್ಯ ಪಟೇಲ್‌ ಹೇಳಿದರು.

Advertisement

ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಶಾಲೆಯ ಸುವರ್ಣ ಮಹೋತ್ಸವ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನದ ಪ್ರೇರಣಾತ್ಮಕ ಉಪನ್ಯಾಸ ನೀಡಿದ ಅವರು, ಕಣ್ಣಿಗೆ ಕಾಣದ ಆದಾಯ ಶಾಶ್ವತವಾಗಿರುತ್ತದೆ. ಹೀಗಾಗಿ ನಮ್ಮ ವಿಚಾರಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಯಾವ ವಿಷಯದ ಬಗ್ಗೆ ಹೆಚ್ಚು ವಿಚಾರ ಮಾಡುತ್ತೇವೆಯೋ ಆ ಕೆಲಸದತ್ತ ಗಮನಹರಿಸಬೇಕು. ಅಂದಾಗ ಮಾತ್ರ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದರು.

ಜೀವನದಲ್ಲಿ ಏಕಾಗ್ರತೆ-ನಂಬಿಕೆ ಬಹಳ ಮುಖ್ಯವಾಗಿದೆ. ಈ ಎರಡು ಅಂಶಗಳೇ ಯಶಸ್ಸು ಜೀವನದ ಮೆಟ್ಟಿಲುಗಳು. ಮುಖ್ಯವಾಗಿ ನಿಮ್ಮ  ಮೇಲೆ ನಿಮಗೆ ನಂಬಿಕೆ ಇರಲಿ. ನೀವು ಮಾಡುವ ಕೆಲಸ ಹಾಗೂ ಕಾರ್ಯ ಕುರಿತಾಗಿ ಕನಸು ಕಂಡಿದ್ದಲ್ಲಿ ನನಸಾಗಲು ಸಾಧ್ಯ. ನೀವು ಬುದ್ದಿವಂತ-ಜಾಣ ಎನ್ನುವುದನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿರಿ. ಹೆಚ್ಚು ಅಂಕ ಪಡೆದುಕೊಳ್ಳುವ ಹೆಮ್ಮೆಯ ಅಂಶ ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ದೈಹಿಕ ಬದಲಾವಣೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಓದಿನ ಕಡೆ ಲಕ್ಷ್ಯ ವಹಿಸಬೇಕು. ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ಸತತ ಓದದೇ ಪ್ರತಿ 40 ನಿಮಿಷಗಳ ನಡುವೆ ಅಂದರೆ 5ರಿಂದ 10 ನಿಮಿಷಗಳ ಕಾಲ ವಿಶ್ರಾಂತಿ ನೀಡಬೇಕು. ಹರಟೆ ಹೊಡೆಯಬೇಕು. ಸತತ ಒಂದೇ ವಿಷಯ ಓದದೇ ಬೇರೆ-ಬೇರೆ ವಿಷಯಗಳನ್ನು ಓದಬೇಕು ಎಂದು ಹೇಳಿದರು.
 
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್‌ ಬಿಆರ್‌ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಸತೀಶ ಹಡಗಿಲ್‌ವುಠ, ಉದಯಕುಮಾರ ಚಿಂಚೋಳಿ, ಖ್ಯಾತ ವೈದ್ಯರಾದ ಡಾ| ಸಂಗ್ರಾಮ ಬಿರಾದಾರ, ಡಾ| ಸುಧಾ ಹಾಲಕಾಯಿ, ಅಶೋಕ ಕಿಣಗಿ, ಅಪ್ಪು ಕಣಕಿ ಮುಂತಾದವರಿದ್ದರು.

ಸುನೀಲ-ಸುಹಾನಾ ಹಾಡಿಗೆ ಹೆಜ್ಜೆ ಹಾಕಿದರು
ಕಲಬುರಗಿ: ತವರು ಮನೆ ಹುಡುಗ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಜೀ ವಾಹಿನಿಯ ಸರಿಗಮಪ ವಿಜೇತ ಸುನೀಲ ನೆಲೋಗಿ ಹಾಗೂ ಸೈಯದ್‌ ಸುಹಾನಾ ಅವರ ಹಾಡಿಗೆ ಚಿಕ್ಕವರಿಂದ ಹಿಡಿದು ಹಲವರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ದೃಶ್ಯ ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ವಸತಿ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡು ಬಂತು. ಸುಹಾನಾ ಮುಕುಂದಾ ಮುರಾರಿ….. ಹಾಡಿನೊಂದಿಗೆ ಗಾಯನ ಶುರು ಮಾಡಿದರು. ಸುನೀಲ ಏನಾಯಿತು..ಏನಾಯಿತೋ ಹಾಡಿನೊಂದಿಗೆ ಶುಭಾರಂಭ ಕೋರಿದರು. ಸುನೀಲ ಮೊಗ್ಗಿನ ಮನಸ್ಸು ಚಿತ್ರದ ಐ ಲವ್‌ ಯೂ ಹಾಡನ್ನು ಪ್ರೇಕ್ಷಕರ ನಡುಗೆ ನುಗ್ಗಿ ಜೋಶ್‌ದಿಂದ ಹಾಡಿರುವುದು ಎಲ್ಲರ ಗಮನ ಸೆಳೆಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next