ನವ ರಾಯ್ಪುರ: ಕರ್ನಾಟಕ ಸಹಿತ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹಲವು ರಾಜ್ಯಗಳ ಪಕ್ಷದ ಕಾರ್ಯಕರ್ತಕರು, ಮುಖಂಡರು ಶಿಸ್ತಿನಿಂದ ಮತ್ತು ಒಗ್ಗಟ್ಟಿನಿಂದ ದುಡಿಯಬೇಕು’ – ಇದು ನವ ರಾಯು³ರದಲ್ಲಿ ಮುಕ್ತಾಯವಾದ ಕಾಂಗ್ರೆಸ್‌ನ 85ನೇ ಮಹಾಧಿವೇಶನದ ನಿರ್ಣಯ.
ಜತೆಗೆ ಈ ವರ್ಷ ನಡೆಯಲಿರುವ ಆರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಿದ್ಧರಾಗಲು ಅಗತ್ಯ ತಯಾರಿ ನಡೆಸುವಂತೆಯೂ ಮುಖಂಡ ರಿಗೆ ಸೂಚನೆ ನೀಡಲಾಗಿದೆ.
ಈ ವರ್ಷ ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.
ಇಲ್ಲೆಲ್ಲ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟು ಮತ್ತು ಶಿಸ್ತಿನಿಂದ ಕೆಲಸ ಮಾಡಬೇಕಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಹೊಂದಿರುವ ವಿಭಾಜಕ ನೀತಿಯ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯವಿದೆ. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳ ಜತೆಗೆ ಕೆಲಸ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ದೇಶದ ಆರ್ಥಿಕ ಅಸಮಾನತೆ, ಹೆಚ್ಚುತ್ತಿರುವ ಸಾಮಾಜಿಕ ಧ್ರುವೀಕರಣ, ಹೆಚ್ಚುತ್ತಿರುವ ರಾಜಕೀಯ ನಿರಂಕುಶಾಧಿಕಾರತ್ವದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೂಂದು ಯಾತ್ರೆ ಆರಂಭಿಸಲು ನಿರ್ಣಯಿಸಲಾಗಿದೆ. ಅರುಣಾಚಲ ಪ್ರದೇಶದ ಪಾಸಿಘರ್ ಎಂಬಲ್ಲಿಂದ ಗುಜರಾತ್‌ನ ಪೋರ್‌ಬಂದರ್ ವರೆಗೆ ಯಾತ್ರೆ ನಡೆಸಲು ಉದ್ದೇಶಿಸಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಗಿಂತ ಈ ಯಾತ್ರೆಯ ಭಿನ್ನವಾಗಿರಲಿದೆ, ಯಾತ್ರೆಯು ನವೆಂಬರ್ ಒಳಗಾಗಿ ನಡೆಯುವ ಸಾಧ್ಯತೆಯಿದೆ.