Advertisement

ಯುನೆಸ್ಕೋದಿಂದ ಅಮೆರಿಕ ಹೊರಕ್ಕೆ

09:39 AM Oct 13, 2017 | |

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಸಾಂಸ್ಕೃತಿಕ ವಿಭಾಗ ಯುನೆಸ್ಕೋದ ಚಟುವಟಿಕೆಗಳಿಂದ ಡಿ.31ರ ಬಳಿಕ ಹಿಂದೆ ಸರಿಯುವುದಾಗಿ ಅಮೆರಿಕ ಘೋಷಿಸಿದೆ.

Advertisement

 ಸಾಂಸ್ಕೃತಿಕ ವಿಭಾಗ ಇಸ್ರೇಲಿ ವಿರೋಧಿ ಧೋರಣೆ ಅನುಸರಿಸುತ್ತಿದೆ. ಅದರಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಅಮೆರಿಕ ಸರಕಾರ ಒತ್ತಾಯಿಸುತ್ತಿದೆ. ಡೊನಾಲ್ಡ್‌ ಟ್ರಂಪ್‌ ಸರಕಾರದ ನಿರ್ಧಾರವನ್ನು ಸಂಘಟನೆಗೆ ಈಗಾಗಲೇ ತಿಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ. 

ಸಂಘಟನೆಯಿಂದ ಹೊರ ಬಂದರೂ ಅದರ ಜತೆ ನಿಕಟ ಸಂಪರ್ಕ ಇರಿಸಲು ಸರಕಾರಕ್ಕೆ ಆಸಕ್ತಿ ಇದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next