Advertisement

ಆರಂಭವಾಗದ ರಸ್ತೆ ಕಾಮಗಾರಿ: ಆಕ್ರೋಶ

02:35 AM Jun 20, 2018 | Team Udayavani |

ತೆಕ್ಕಟ್ಟೆ: ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ತೆಕ್ಕಟ್ಟೆ – ದಬ್ಬೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅನುದಾನದಲ್ಲಿ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ 980 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿಗೆ ಚಾಲನೆ ದೊರಕಿದ್ದು ಇದೀಗ ಉಳ್ತೂರಿನವರೆಗೆ ಪೂರ್ಣಗೊಂಡಿದೆ. ಆದರೆ ಮಲ್ಯಾಡಿಯಿಂದ ತೆಕ್ಕಟ್ಟೆಯವರೆಗೆ ಮಾತ್ರ ಕಾಮಗಾರಿ ಆರಂಭವಾಗದೆ ಇರುವ ಕಾರಣ ಬರೀ ಹೊಂಡ ಗುಂಡಿಗಳಿಂದಾಗಿ ರಸ್ತೆ ಯಾವುದೆಂದು ಗೊತ್ತಾಗದ ಪರಿಸ್ಥಿತಿ ಎದುರಾಗಿದೆ.

Advertisement

ಘನ ವಾಹನಗಳ ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ರಸ್ತೆಯಲ್ಲಿ ಹೊಂಡಗಳನ್ನು ಲೆಕ್ಕಿಸದೆ ವಾಹನ ಚಾಲಕರು ಎಗ್ಗಿಲ್ಲದೆ ಸಾಗುತ್ತಿದ್ದು, ರಸ್ತೆಯ ಸಮೀಪದ ನಿವಾಸಿಗಳು ಹಾಗೂ ದಾರಿಹೋಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆ ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next