Advertisement

ಹೊರಮಾವು ವಾರ್ಡ್‌ನಲ್ಲಿ ಅವ್ಯವಸ್ಥೆಗಳದ್ದೇ ದರ್ಬಾರ್

12:22 PM Oct 16, 2020 | Suhan S |

ಕೆ.ಆರ್‌.ಪುರ: ಒಂದು ಲಕ್ಷಕ್ಕೂ ಹೆಚ್ಚು ಮತದಾರರು ಹೊಂದಿರುವ ಹೊರಮಾವುವಾರ್ಡ್‌ ನಲ್ಲಿ ಮೂಲ ಸೌಲಭ್ಯಗಳ ಕೊರತೆಯೇ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಕ್ಯಾಲಸನಹಳ್ಳಿ, ನಗರೇಶ್ವರ ನಾಗೇನಹಳ್ಳಿ, ಹೊಯ್ಸಳನಗರ, ಹೊರಮಾವು, ಜಯಂತಿನಗರ,ಅಗರ, ಕೊತ್ತನೂರು, ಕೆ.ನಾರಾಯಣಪುರ, ಚೇಳ ಕೆರೆ,ಬಾಬುಸಪಾಳ್ಯ,ಗೆದ್ದಲಹಳ್ಳಿಮುನೇಶ್ವರನಗರ ಹೊರಮಾವು ವಾರ್ಡ್‌ ವ್ಯಾಪ್ತಿಗೆ ಬರುತ್ತದೆ. ರಾಮಮೂರ್ತಿನಗರ ರೈಲ್ವೆ ಮೇಲ್ಸೇತುವೆ,ಹೊರಮಾವು ಕೆಳಸೇತುವೆ, ಅಗರ ಕೆರೆ ಅಭಿವೃದ್ಧಿ, ಎರಡು ಸಾವಿರ ಸಾಮರ್ಥ್ಯದ ಕೆಇಬಿ. ಎಸ್‌ಟಿಪಿಪ್ಲಾಂಟ್‌, ಒಳಚರಂಡಿ ಅಭಿವೃದ್ಧಿಕಾಮಗಾರಿಗಳುನಡೆಯುತ್ತಿದೆ. ಕೆಲವು ರಸ್ತೆಗಳು ಡಾಂಬರೀಕರಣಆಗಿರುವುದು ಬಿಟ್ಟರೆ, ಗ್ರಾಮೀಣ ಪ್ರದೇಶದ ಬಡಾವಣೆಯ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ ಎಂಬುದು ಸಾರ್ವಜನಿಕ ಅರೋಪವಾಗಿದೆ.

ಮಳೆ ಬಂದರೆ ಪ್ರವಾಹ ಸೃಷ್ಟಿ; ಎರಡು ವಾರದ ಹಿಂದೆ ಸುರಿದ ಮಳೆಗೆ ಗೆದ್ದಲಹಳ್ಳಿ ರಾಜಕಾಲುವೆ ಯಿಂದ ಪ್ರವಾಹ ಉಂಟಾಗಿ ರಾಜಕಾಲುವೆ ನೀರು ಬಡಾವಣೆ ನುಗ್ಗಿದ ಪರಿಣಾಮ ವಡ್ಡರಪಾಳ್ಯ, ಕಾವೇರಿನಗರ, ಟ್ರಿನಿಟಿ ಪ್ರಚೂÂನ್‌ ಬಡಾವಣೆಗಳು ಜಲಾವೃತವಾಗಿದ್ದವು. ವಾರ್ಡ್‌ ವ್ಯಾಪ್ತಿಯ ಚೇಳಕೆರೆ ಕೆರೆ, ಹೊರಮಾವು, ನಗರೇಶ್ವರ, ನಾಗೇನಹಳ್ಳಿ ಕೆರೆಗಳು ಅಭಿವೃದ್ಧಿ, ನಿರ್ವಹಣೆಯಲ್ಲಿ ಹಿಂದೆ ಬಿದ್ದಿದ್ದು ಆಗಾಗ ಅನಾಹುತ ಸೃಷ್ಟಿಗೆಕಾರಣವಾಗುತ್ತಿವೆ.

ಸಂಚಾರಕ್ಕೆ ತೊಡಕು: ಹೊರಮಾವು ಅಗರದಿಂದ ಬಾಬುಸಪಾಳ್ಯಗೆ ಸಂಪರ್ಕ ಕಲ್ಪಿಸುವ ಹೊರ ಮಾವು ಅಗರ ರೈಲ್ವೆ ಕೆಳಸೇತುವೆ ನಿರ್ಮಾಣ ವಾಗದೆ ಇದರಿಂದಾಗಿ ಕಿರಿದಾದ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಬೇಕಾಗಿದೆ. ಇದರಿಂದ ತಾಸುಗಟ್ಟಲೆ ನಿಲ್ಲವು ಸ್ಥಿತಿ ನಿರ್ಮಾಣವಾಗಿದೆ.

ಪೈಪ್‌ಲೈನ್‌ ಅವ್ಯವಸ್ಥೆ: ಬಾಬುಸಪಾಳ್ಯ, ಚೇಳ ಕೆರೆ, ಕೊತ್ತನೂರು, ವಡ್ಡರಪಾಳ್ಯ, ಅಗರ, ಜಯಂತಿ ನಗರ, ಮುನೇಶ್ವರ ಕಡೆಗಳಲ್ಲಿ 110ಹಳ್ಳಿಗಳಿಗೆ ಕಾವೇರಿ ನೀರಿನ ಯೋಜನೆಯಿಂದ ಹೊಸದಾಗಿ ಸೇರ್ಪಡೆಯಾದ ಗ್ರಾಮೀಣಪ್ರದೇಶದ ಹಳ್ಳಿ ಗಳಲ್ಲಿ ಕಾವೇರಿ ಪೈಪಲೈನ್‌ಅಳವಡಿಸುವ ಸಲು ವಾಗಿ ಅಗೆಯಲಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಿಲ್ಲ ಇಲ್ಲಿನ ರಸ್ತೆಗಳು ಕೆಸರು ಗದ್ದೆಯಾಗುತ್ತವೆ. ಇನ್ನೂಕೆಲವಡೆಕಾವೇರಿ ನೀರಿನ ಸಂಪರ್ಕ ಪಡೆದರು ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಅಭಿವೃದ್ಧಿ ನಿರಂತರ :  ಚೇಳಕೆರೆಯಿಂದ, ಗೆದ್ದಲಹಳ್ಳಿ, ಹೊರಮಾವು ಬೃಂದಾವನ,ಅಗರ ಓಣಿ ಕಡೆಗಳಲ್ಲಿರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಅಗರಕೆರೆ, ಚೇಳಕರೆ ಪಾರ್ಕ್‌, ಸುಸಜ್ಜಿತ ಬುಲೇ ವಾರ್ಡ್‌ ಪಾರ್ಕ್‌ ನಿರ್ಮಿಸಲಾಗಿದೆ. 200ಕೋಟಿ ವೆಚ್ಚದಲ್ಲಿ ಎಲ್ಲಾ ರಸ್ತೆಗಳಿಗೆಡಾಂಬರೀಕರಣ ಮಾಡಲಾಗಿತ್ತು.450 ಕೋಟಿ ವೆಚ್ಚದಲ್ಲಿ ಯುಜಿಡಿ,178ಕೋಟಿ ವೆಚ್ಚದಲ್ಲಿಕಾವೇರಿ ಪೈಪಲೈನ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ.ಕಾಮಗಾರಿ ಬಳಿಕ ರಸ್ತೆ ಅಭಿವೃದ್ಧಿ ಮಾಡಲಾಗುವುದು. 12 ಶುದ್ಧ ನೀರಿನ ಘಟಕಗಳು, ರಾಮ ಮೂರ್ತಿನಗರ ಹಾಗೂ ಹೊರಮಾವು ರೈಲ್ವೆ ಸೇತುವೆ ನಿರ್ಮಾಣವಾಗಿದೆ ವಾರ್ಡನಲ್ಲಿ ಎಲ್ಲಡೆ ಸ್ಟ್ರೀಟ್‌ ಲೈಟ್‌ ಅಳವಡಿಸಿದ್ದೇವೆ ಎಂದು ಪಾಲಿಕೆ ಮಾಜಿ ಸದಸ್ಯೆ ರಾಧಮ್ಮ ತಿಳಿಸಿದರು

ಕಾವೇರಿ ನೀರಿನ ಸಂಪರ್ಕಕ್ಕೆ ಎರಡೂವರೆ ಸಾವಿರ ಶುಲ್ಕಕಟ್ಟಿಸಿಕೊಂಡಿದ್ದಾರೆ. 2 ವರ್ಷ ಕಳೆದರೂ ಅಧಿಕಾರಿಗಳುಕಾವೇರಿ ನೀರಿನ ಪೂರೈಕೆ ಮಾಡಿಲ್ಲ. ಹದಗೆಟ್ಟಿರುವ  ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ ನಿತ್ಯ ಓಡಾಡಲು ಕಷ್ಟವಾಗುತ್ತಿದೆ. ಸುನಿಲ್‌, ಚೇಳಕೆರೆ ನಿವಾಸಿ

ಗ್ರಾಮದಲ್ಲಿ ಒಂದೇ ಕೊಳವೆ ಬಾವಿ ಇದ್ದು ಕುಡಿವ ನೀರಿಗೆ ತತ್ವಾರ. ನಮ್ಮ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ನಡೆದು, ಆರುವರ್ಷವಾದರೂ, ರಸ್ತೆ ನಿರ್ಮಿಸಿಲ್ಲ. ಮಳೆಬಂದರೆ ಮನೆಗಳಿಗೆಚರಂಡಿನೀರು ನುಗ್ಗುತ್ತೆ. ಪಾಲಿಕೆ ಸದಸ್ಯರಾಗಿದ್ದವರು ನಮ್ಮಬಡಾವಣೆಗೆ ಭೇಟಿಯೇ ನೀಡಿಲ್ಲ. ಸಮಸ್ಯೆ ಆಲಿಸಿಲ್ಲ. ದಿವ್ಯನಾದನ್‌, ಪೂಜಪ್ಪ ಬಡಾವಣೆಯ ನಿವಾಸಿ

 

ಕೆ.ಆರ್‌.ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next