Advertisement

ರೊಹಿಂಗ್ಯಾಗಳ ಗಡೀಪಾರು: ಭಾರತದ ಕ್ರಮಕ್ಕೆ ವಿಶ್ವಸಂಸ್ಥೆ ಖಂಡನೆ

04:46 PM Oct 05, 2018 | Team Udayavani |

ಜಿನೇವಾ : ಅಕ್ರಮವಾಗಿ ನೆಲೆಸಿದ್ದ ಏಳು ಮಂದಿ ರೊಹಿಂಗ್ಯಾಗಳನ್ನು ಮ್ಯಾನ್‌ಮಾರ್‌ಗೆ ಗಡೀಪಾರು ಮಾಡಿರುವ ಭಾರತದ ಕ್ರಮವನ್ನು ವಿಶ್ವಸಂಸ್ಥೆ ಕಟುವಾಗಿ ಟೀಕಿಸಿ ಖಂಡಿಸಿದೆ. 

Advertisement

ಮುಸ್ಲಿಂ ಅಲ್ಪಸಂಖ್ಯಾಕರ ವಿರುದ್ಧ ಜನಾಂಗೀಯ ಹತ್ಯೆಯಲ್ಲಿ ನಿರತವಾಗಿರುವ ಆರೋಪಕ್ಕೆ ಗುರಿಯಾಗಿರುವ ಮ್ಯಾನ್‌ಮಾರ್‌ ಮಿಲಿಟರಿಯ ಕೈಯಲ್ಲಿ  ಗಡೀಪಾರುಗೊಂಡಿರುವ ಈ ರೊಹಿಂಗ್ಯಾಗಳ ಭದ್ರತೆ ಮತ್ತು ಸುರಕ್ಷೆಗೆ ಅಪಾಯ ಇರುವ ಬಗ್ಗೆ ವಿಶ್ವಸಂಸ್ಥೆ ಭೀತಿ ವ್ಯಕ್ತಪಡಿಸಿದೆ. 

2012ರಲ್ಲಿ ಭಾರತದೊಳಗೆ ಅಕ್ರಮವಾಗಿ ನುಸುಳಿ ಬಂದ ಇಲ್ಲೇ ವಾಸವಾಗಿದ್ದ ಏಳು ಮಂದಿ ರೊಹಿಂಗ್ಯಾಗಳನ್ನು ಕಳೆದ ಮಂಗಳವಾರ ಈಶಾನ್ಯ ರಾಜ್ಯವಾಗಿರುವ ಮಣಿಪುರದ ಗಡಿಯಲ್ಲಿ ಭಾರತೀಯ ಅಧಿಕಾರಿಗಳು ಮ್ಯಾನ್‌ಮಾರ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next