ಬಾಕು: ಭೂಗೋಳದ ದಕ್ಷಿಣ ದೇಶಗಳಿಗಾಗಿ ವಿಶ್ವಸಂಸ್ಥೆಯ ಹವಾಮಾನ ಸಮಾವೇಶವು ಘೋಷಿಸಿರುವ ವಾರ್ಷಿಕ ಅಂದಾಜು 25,000 ಕೋಟಿ ರೂ. ಮೊತ್ತದ “ಹವಾಮಾನ ಹಣಕಾಸು ಪ್ಯಾಕೇಜ್’ ಅನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.
“ಬಡದೇಶಗಳಿಗೆ ಅತ್ಯಲ್ಪ ಪ್ಯಾಕೇಜ್ ನೀಡಲಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಲೂ ಸಹ ಅವಕಾಶ ನೀಡಿಲ್ಲ. ಹವಾಮಾನ ಸಮಾವೇಶದ ಅಧ್ಯಕ್ಷತೆ ವಹಿಸಿರುವ ರಾಷ್ಟ್ರ ಹಾಗೂ ವಿಶ್ವಸಂಸ್ಥೆ ಈ ಪ್ಯಾಕೇಜ್ ಘೋಷಿಸಿವೆ’ ಎಂದು ಭಾರತದ ಪ್ರತಿನಿಧಿ ಚಾಂದಿನಿ ರಾಣಾ ಹೇಳಿದ್ದಾರೆ.
“ಈ ಪ್ಯಾಕೇಜ್ ಅನ್ಯಾಯದಿಂದ ಕೂಡಿದೆ. ಕೆಲವರಿಗೆ ಮಾತ್ರ ಅನುಕೂಲವಾಗುವಂತೆ ರೂಪಿಸಲಾಗಿದೆ.
ಪ್ಯಾಕೇಜ್ ಅಂಗೀಕರಿಸುವುದಕ್ಕೂ ಮೊದಲು ಈ ವಿಷಯವಾಗಿ ಮಾತನಾಡಬೇಕೆಂಬ ಭಾರತದ ಮನವಿ ನಿರ್ಲಕ್ಷಿಸಲಾಗಿದೆ. ಈ ಘಟನೆಯಿಂದ ನಿರಾಸೆಯಾಗಿದೆ’ ಎಂದಿದ್ದಾರೆ. ಭಾರತಕ್ಕೆ ನೈಜೀ ರಿಯಾ ಬೆಂಬಲ ನೀಡಿದೆ. “25,000 ಕೋಟಿ ರೂ. ಪ್ಯಾಕೇಜ್ ಘೋಷಿಸಿರುವುದು ತಮಾಷೆಯಾಗಿದೆ’ ಎಂದಿದೆ. ಮಲಾವಿ, ಬೊಲಿವಿಯಾ ರಾಷ್ಟ್ರಗಳೂ ಭಾರತವನ್ನು ಬೆಂಬಲಿಸಿವೆ. ದಕ್ಷಿಣದ ದೇಶಗಳು 1.3 ಟ್ರಿಲಿಯನ್ ಡಾಲರ್ ನೀಡಬೇಕು ಎಂದು ಮನವಿ ಮಾಡಿದ್ದವು.