Advertisement

Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

02:34 PM Nov 19, 2024 | Team Udayavani |

ಉಳ್ಳಾಲ: ಪದವಿಪೂರ್ವ ಶಿಕ್ಷಣ ಯಶಸ್ವಿಯಾಗಬೇಕಾದರೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಪ್ರಾ., ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಸಂಸ್ಥೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ, ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳು ಹೆಚ್ಚಾಗಿ ಪ.ಪೂ. ಶಿಕ್ಷಣ ದವರೆಗೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಯಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ವಾಗುವುದರಿಂದ ಮೂಲ ಸೌಕರ್ಯ ಮತ್ತು ಶಿಕ್ಷಕರ ನೇಮಕ ಸಾಧ್ಯ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಹರೇಕಳದ ನ್ಯೂಪಡ್ಪುವಿನಲ್ಲಿ ಸೋಮವಾರ ನೂತನವಾಗಿ ಆರಂಭಗೊಂಡಿರುವ ಸರಕಾರಿ ಪದವಿ ಪೂರ್ವ ಕಾಲೇಜನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.

ನ್ಯೂಪಡ್ಪುವಿನಲ್ಲಿ ಪ್ರಾಥಮಿಕ ಶಾಲೆಗೆ ಆಂಗ್ಲ ಶಿಕ್ಷಣವನ್ನು ಆರಂಭಿಸಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ವಿದ್ಯಾರ್ಥಿಗಳು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ಬರುವುದರಿಂದ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ಯಶಸ್ವಿಯಾಗಲು ಸಾಧ್ಯ ಎಂದರು. ಜನಪ್ರತಿನಿ ಧಿಗಳು, ಅಧಿ ಕಾರಿಗಳಿಗೆ ಸೂಚನೆ ನೀಡಬಹುದು, ಆದರೆ ಫಾಲೋಅಪ್‌ ಮಾಡುವ ಜವಾಬ್ದಾರಿ ಅಗತ್ಯ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಜಬ್ಬರನ್ನು ನೋಡಿ ಕೆಲಸ ಮಾಡುವುದು ಕಲಿಯಬೇಕು ಎಂದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಪ್ರಸ್ತುತ 24 ವಿದ್ಯಾರ್ಥಿಗಳು ಪ.ಪೂ.ಕಾಲೇಜಿನಲ್ಲಿ ಇದ್ದಾರೆ. ಮೂರು ಕೋಟಿ ರೂ. ಅನು ದಾ ನದ ಅಗತ್ಯವಿದೆ. 1.30 ಎಕರೆ ಜಮೀನು ಮೀಸಲಿದ್ದು ನಾಲ್ಕು ಕೊಠಡಿಗಳ ಅವಶ್ಯಕತೆಯಿದೆ. ತತ್‌ಕ್ಷಣ ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿದರೆ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ತ್ಯಾಗಂ ಹರೇಕಳ ಇವರನ್ನು ಅಭಿನಂದಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್‌, ಮಂಗಳೂರು ವಿ.ವಿ. ಸಿಂಡಿಕೇಟ್‌ ಸದಸ್ಯ ಅಚ್ಚುತ ಗಟ್ಟಿ, ಹರೇಕಳ ಗಾ. ಪಂ.ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್‌ ಮಜೀದ್‌, ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್‌ ಫರೀದ್‌ ನಗರ, ಪ್ರೌಢಶಾಲಾ ಮುಖ್ಯಶಿಕ್ಷಕ ಲಕ್ಷ್ಮಣ, ಪಜೀರ್‌ ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ವಲೇರಿಯನ್‌ ಡಿ’ಸೋಜಾ, ಗ್ರಾ.ಪಂ. ಸದಸ್ಯರಾದ ಅಬ್ದುಲ್‌ ಸತ್ತಾರ್‌ ಬಾವಲಿಗುರಿ, ಅಬೂಬಕ್ಕರ್‌ ಸಿದ್ಧೀಕ್‌, ಅನಿತಾ ಡಿ.ಸೋಜಾ, ಎಸ್‌.ಎಂ.ಬಶೀರ್‌, ಭರತ್‌ ರಾಜ್‌ ಶೆಟ್ಟಿ ಪಜೀರುಗುತ್ತು, ಬಶೀರ್‌ ಉಂಬುದ , ಮಹಮ್ಮದ್‌ ಮುಸ್ತಫಾ ಮಲಾರ್‌ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಡಾ| ಅಬ್ದುಲ್‌ ರಝಾಕ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next