ಕೀವ್/ಎಲ್ವೀವ್: ಉಕ್ರೇನ್ ನ ಮರಿಯುಪೋಲ್ ನ ರಂಗಮಂದಿರದ ಮೇಲೆ ರಷ್ಯಾ ಸೇನಾಪಡೆ ಭೀಕರ ಬಾಂಬ್ ದಾಳಿ ನಡೆಸಿರುವುದಾಗಿ ಉಕ್ರೇನ್ ಆರೋಪಿಸಿದ್ದು, ಇಲ್ಲಿ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು ಎಂದು ತಿಳಿಸಿದೆ.
ಇದನ್ನೂ ಓದಿ:ಮನೆಯಲ್ಲಿ ನಂಬರ್ 1 ಯಾರು ? ಧೋನಿ ಕೊಟ್ಟ ಉತ್ತರವೇನು ?
ಉಕ್ರೇನ್ ನ ರಂಗಮಂದಿರದ ಮೇಲೆ ಬಾಂಬ್ ಸುರಿಮಳೆಗೈದಿರುವ ರಷ್ಯಾದ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಶಾಂತಿ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದ್ದು, ವ್ಲಾದಿಮಿರ್ ಪುಟಿನ್ ಯುದ್ಧಾಪರಾಧಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ(ಮಾರ್ಚ್ 17) ರಷ್ಯಾ ಸೇನೆ ಪ್ರಸಿದ್ಧ ರಂಗಮಂದಿರವನ್ನು ಬಾಂಬ್ ದಾಳಿಯಲ್ಲಿ ನಾಶಪಡಿಸಿದೆ. ಈ ಸ್ಥಳದಲ್ಲಿ ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ರಷ್ಯಾದ ದಾಳಿಯನ್ನು ನಾವೆಂದಿಗೂ ಮರೆಯುವುದಿಲ್ಲ ಎಂದು ಮರಿಯುಪೋನ್ ನ ಸ್ಥಳೀಯ ಅಧಿಕಾರಿ ಟೆಲಿಗ್ರಾಮ್ ಪೋಸ್ಟ್ ಗೆ ತಿಳಿಸಿದ್ದಾರೆ.
ಮರಿಯುಪೋಲ್ ರಂಗಮಂದಿರದ ಮೇಲೆ ದಾಳಿ ನಡೆಸಿಲ್ಲ ಎಂದು ರಷ್ಯಾ ಸೇನೆ ತಿಳಿಸಿದೆ. ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವೆ ಬೆಲಾರಸ್ ನಲ್ಲಿ ಸಂಧಾನ ಮಾತುಕತೆ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.