Advertisement

ಕಾಳಿ ಮಾತೆಗೆ ಉಕ್ರೇನ್‌ ಅವಮಾನ: ಜಾಲತಾಣದಲ್ಲಿ ಪ್ರಬಲ ಆಕ್ಷೇಪಗಳ ಬಳಿಕ ಡಿಲೀಟ್‌

11:52 PM Apr 30, 2023 | Team Udayavani |

ಕೀವ್‌/ಹೊಸದಿಲ್ಲಿ: ರಷ್ಯಾ ಆಕ್ರಮಣದಿಂದ ನಲಗುತ್ತಿರುವ ಉಕ್ರೇನ್‌ ಒಂದೆಡೆ ಭಾರತದ ಸಹಾಯಕ್ಕೆ ಅಂಗಲಾಚುತ್ತಿದೆ. ಮತ್ತೂಂದೆಡೆ ಅದೇ ಉಕ್ರೇನ್‌ ಕಾಳಿ ಮಾತೆಗೆ ಅಪಮಾನವೆಸಗಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಉಕ್ರೇನ್‌ನ ರಕ್ಷಣ ಸಚಿವಾಲಯದ ಟ್ವಿಟರ್‌ ಖಾತೆ ಯಲ್ಲಿ “ವರ್ಕ್‌ ಆಫ್ ಆರ್ಟ್‌’ ಎನ್ನುವ ತಲೆಬರಹದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿತ್ತು.

Advertisement

ಅದರಲ್ಲಿ ಮೋಡದ ಚಿತ್ರವೊಂದನ್ನು ಮಹಿಳೆಯಂತೆ ರಚಿಸಲಾಗಿದ್ದು, ದೇಹಭಾಗವನ್ನು ಕಾಳಿಯಂತೆಯೂ, ತಲೆಕೂದಲನ್ನು ಹಾಲಿವುಡ್‌ ನಟಿ ಮರ್ಲಿನ್‌ ಮನ್ರೊà ರೀತಿ ರಚಿಸಲಾಗಿದೆ. ಕಾಳಿ ದೇಹವಿರುವ ಚಿತ್ರದಲ್ಲಿ ಮೋಡವನ್ನೇ ಸ್ಕರ್ಟ್‌ ರೀತಿ ರಚಿಸಿ, ಗಾಳಿಗೆ ಅದು ತೂರುವಂತೆ ಚಿತ್ರಿಸಿ, ಅಪಮಾನ ಮಾಡಲಾಗಿದೆ.

ಕೇಂದ್ರ ಸರಕಾರ ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್‌ ಗುಪ್ತಾ ಒತ್ತಾಯಿಸಿದ್ದಾರೆ. ಜತೆಗೆ ಟ್ವಿಟರ್‌ನಲ್ಲಿ ಕೂಡ ಉಕ್ರೇನ್‌ ಸರಕಾರದ ಉದ್ಧಟತನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಆಕ್ಷೇಪಾರ್ಹ ಟ್ವೀಟ್‌ ಅನ್ನು ಡಿಲೀಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next