Advertisement

ಲಂಡನ್‌ನಲ್ಲಿ ಭಾರತೀಯ ಚಿನ್ನ ವ್ಯಾಪಾರಿ ಕೊಲೆ: 6 ಮಂದಿ ಸೆರೆ

11:20 AM Feb 01, 2018 | Team Udayavani |

ಲಂಡನ್‌ : ಲೀಸೆಸ್ಟರ್‌ನಲ್ಲಿ  ಕಳೆದ  ವಾರ ಕೊಲೆಯಾದ ಸ್ಥಿತಿಯಲ್ಲಿ  ಪತ್ತೆಯಾಗಿದ್ದ ಭಾರತೀಯ ಮೂಲದ ಚಿನ್ನಾಭರಣ ವ್ಯಾಪಾರಿ ರಮಣಿಕ್‌ಲಾಲ್‌ ಜೋಗಿಯಾ ಮರ್ಡರ್‌ ಕೇಸಿಗೆ ಸಂಬಂಧಿಸಿ ಬ್ರಿಟಿಷ್‌ ಪೊಲೀಸರು ಆರನೇ ವ್ಯಕ್ತಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

Advertisement

74ರ ಹರೆಯದ ರಮಣಿಕ್‌ಲಾಲ್‌ ಅವರು ರಾತ್ರಿ ತಮ್ಮ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ಮುಸುಕುಧಾರಿಗಳನ್ನು ಅವರನ್ನು ಕಾರಿನೊಳಗೆ ಸೆಳೆದುಕೊಂಡು ಪರಾರಿಯಾಗಿದ್ದರು. 

ಈಗ ಬಂಧಿತನಾಗಿರುವ ಆರನೇ ವ್ಯಕಿತಯು 20ರ ಹರೆಯದವನಾಗಿದ್ದು ಆತನನ್ನು ಅಪಹರಣ ಮತ್ತು ಕೊಲೆ ಕೃತ್ಯ ಎಸಗಿದ ಶಂಕೆಯಲ್ಲಿ ಅರೆಸ್ಟ್‌ ಮಾಡಲಾಗಿದೆ; ಪ್ರಕೃತ ಆತ ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾನೆ; ಡಿಟೆಕ್ಟೀವ್‌ಗಳು ಆತನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಲೀಸೆಸ್ಟರ್‌ಶಯರ್‌ ಪೊಲೀಸರು ಹೇಳಿದ್ದಾರೆ. 

ಈ ಮೊದಲು ಬಂಧಿತರಾಗಿದ್ದ ಐವರು 18, 22, 19 20, 23ರ ಹರೆಯದವರಾಗಿ ಲೀಸೆಸ್ಟರ್‌ ವಾಸಿಗಳೇ ಆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next