ಕುಂಬಳೆ: ಪಿಕಪ್ ವಾಹನಗಳಲ್ಲಿ ಸಾಗಿಸುತ್ತಿದ್ದ 4,82,514 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡು ಕಲ್ಲಿಕೋಟೆ ವೆಳ್ಳಿಪಂಬ್ ಕುಟ್ಟಮುಚ್ಚಿಕ್ಕಾಲ್‌ನ ಎನ್.ಪಿ.ಅಸ್ಕರ್ ಅಲಿ(36) ಮತ್ತು ಕಲ್ಲಿಕೋಟೆ ಪನ್ನಿಯಾಂಕರ ಪಯನಾಕ್ಕಲ್ ಸೀನತ್ ಹೌಸ್‌ನ ಸಾದಿಕ್ ಆಲಿ(41)ಯನ್ನು ಬಂಧಿಸಿದ್ದಾರೆ.
Advertisement
ಡಿ.17 ರಂದು ರಾತ್ರಿ ಮೊಗ್ರಾಲ್‌ನಿಂದ ಎಸ್.ಐ ವಿ.ಕೆ.ವಿಜಯನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಎರಡು ಪಿಕಪ್ ವಾಹನಗಳನ್ನು ವಶಪಡಿಸಲಾಗಿದೆ. ಸುಮಾರು 50 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ.
ಕಾಸರಗೋಡು: ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿ, ಉದಿನೂರು ಇಯಕ್ಕಾಡ್‌ನ ದಿ| ಸುಮಿತ್ರನ್ ಅವರ ಪುತ್ರಿ ಕೆ.ಮೀರಾ(17) ಮನೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಸೌಖ್ಯದಿಂದಾಗಿ ಪರೀಕ್ಷೆಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನನೊಂದು ನೇಣು ಬಿಗಿದಿರಬಹುದೆಂದು ಶಂಕಿಸಲಾಗಿದೆ. ಪ್ಯಾಕೆಟ್ ಮದ್ಯ ಸಹಿತ ಬಂಧನ
ಕಾಸರಗೋಡು: ಚೆರ್ಕಳದಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 20 ಟೆಟ್ರಾ ಪ್ಯಾಕೆಟ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ಚೆರ್ಕಳದ ರಾಜು ಆಲಿಯಾಸ್ ರಾಜೇಶ್ ಎಂ(36)ನನ್ನು ಬಂಧಿಸಿದೆ.
Related Articles
ಉಪ್ಪಳ: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 8.64 ಲೀಟರ್ ಮದ್ಯವನ್ನು ಮಂಜೇಶ್ವರ ಅಬಕಾರಿ ದಳ ಕಡಂಬಾರ್ ಅಂಗಡಿಪದವು ನಿವಾಸಿ ಬಿ.ಎಂ.ಅನಿಲ್ ಕುಮಾರ್‌ನನ್ನು ಬಂಧಿಸಿದೆ.
Advertisement
ಕಾಪಾ ಆರೋಪಿಯ ಬಂಧನಕಾಸರಗೋಡು: ಆಲಂಪಾಡಿ ಚಕ್ಕರಪಳ್ಳ ನಿವಾಸಿ ಅಮೀರಲಿ(22)ಯನ್ನು ಕಾಪಾ ಪ್ರಕರಣದಂತೆ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಮತ್ತು ಮೇಲ್ಪರಂಬ ಠಾಣೆಗಳಲ್ಲಿ ಅಮೀರಲಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ನ ಬೈಕ್ ಕಳವು
ಕಾಸರಗೋಡು: ಪೊಲೀಸ್ ಸಿಬ್ಬಂದಿಯ ಬೈಕ್ ಕಳವು ಮಾಡಲಾಗಿದೆ. ಆಲಪ್ಪಡಂಚಾಲ್‌ನ ರತೀಶ್ ಅವರ ಬೈಕ್ ಕಳವು ಮಾಡಲಾಗಿದೆ. ಡಿ.13 ರಂದು ಕರ್ತವ್ಯ ನಿಮಿತ್ತ ಮಂಜೇಶ್ವರಕ್ಕೆ ಹೋಗುತ್ತಿದ್ದಾಗ ಬೈಕನ್ನು ಚೆರ್ವತ್ತೂರು ರೈಲು ನಿಲ್ದಾಣ ಪರಿಸರದಲ್ಲಿರಿಸಲಾಗಿತ್ತು. 14 ರಂದು ವಾಪಸಾದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.