Advertisement

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ, ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್

09:15 AM Apr 11, 2020 | Mithun PG |

ಲಂಡನ್: ಕೋವಿಡ್19 ಮಹಾಮಾರಿ ವೈರಸ್ ಗೆ ತುತ್ತಾಗಿ ನಲುಗಿದ್ದ  ಬ್ರಿಟನ್ ಪ್ರಧಾನಿ ಬೋರಿಸ್ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ್ದು, ಅವರನ್ನು ಐಸಿಯುವಿನಿಂದ ವಾರ್ಡ್ ‍ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಬೋರಿಸ್ ಜಾನ್ಸನ್ ಅವರು ಆಸ್ಪತ್ರೆಯಲ್ಲಿರುವ ಕಾರಣ ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು, ಪ್ರಧಾನಿಯವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ ಎಂದಿದ್ದಾರೆ.

55ರ ಹರೆಯದ ಜಾನ್ಸನ್ ಅವರ ಕೋವಿಡ್19 ವೈರಸ್ ಗೆ ತುತ್ತಾಗಿ ತೀವ್ರ ಅಸ್ವಸ‍್ತರಾದ್ದರಿಂದ  ಸೋಮವಾರ ಅವರನ್ನು ಲಂಡನ್ ನಲ್ಲಿರುವ ಸೆಂಟ್ ಥಾಮಸ್  ಆಸ್ಪತ್ರೆಯ ಐಸಿಯುವಿಗೆ ದಾಖಲು ಮಾಡಲಾಗಿತ್ತು. ಎರಡು ವಾರಗಳ ಹಿಂದೆ ಬ್ರಿಟನ್ ಪ್ರಧಾನಿಗೆ ಮಾರಕ ವೈರಸ್ ತಗುಲಿರುವುದು ಖಚಿತವಾಗಿತ್ತು.
ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ ‘ ಶುಭ ಸುದ್ದಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತೀವ್ರ ನಿಗಾ ಘಟಕದಿಂದ ವಾರ್ಡ್ ಗೆ ಸ‍್ಥಳಾಂತರವಾಗಿದ್ದಾರೆ.  ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಬ್ರಿಟನ್ ನಲ್ಲಿ ಮುಂದಿನ ಹಲವು ವಾರಗಳ ವರೆಗೂ ಲಾಕ್ ಡೌನ್ ಮುಂದುವರೆಸಲಾಗುತ್ತದೆ ಎಂದು ಸರ್ಕಾರದ ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next