Advertisement

ಉಡುಪಿಯ ತೇಲು ಜೆಟ್ಟಿಗೆ ಸಿಕ್ಕಿಲ್ಲ ಅನುಮೋದನೆ

12:11 AM Jul 18, 2023 | Team Udayavani |

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಅನುಕೂಲವಾಗುವ ಹಲವು ಬಂದರುಗಳಿವೆ. ಆದರೆ ಎಲ್ಲಿಯೂ ತೇಲುವ ಜೆಟ್ಟಿ ಇಲ್ಲ. ಮಂಗಳೂರಿನ ಹೊಗೆಬಜಾರ್‌ನಲ್ಲಿ ನಿರ್ಮಾಣವಾಗಬೇಕಿರುವ ತೇಲುವ ಜೆಟ್ಟಿಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಉಡುಪಿ ಜಿಲ್ಲೆಯಿಂದ ಹೋಗಿರುವ ಪ್ರಸ್ತಾವನೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ.

Advertisement

ತೇಲುವ ಜೆಟ್ಟಿಯಿಂದ ಮೀನುಗಾರರಿಗೆ ಅನುಕೂಲ ಹೆಚ್ಚಿದೆ. ಆದರೆ ಮೀನುಗಾರಿಕೆ ಉದ್ದೇಶಕ್ಕಾಗಿ ಮಾತ್ರ ತೇಲುವ ಜೆಟ್ಟಿಯನ್ನು ನಿರ್ಮಿಸುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಿ ನಿರ್ಮಿಸಲಾಗುವುದು.

ಮಲ್ಪೆ, ಮಂಗಳೂರು, ಗಂಗೊಳ್ಳಿ ಮೊದ ಲಾದ ಬೃಹತ್‌ ಬಂದರುಗಳಲ್ಲಿ ಸುಸಜ್ಜಿತ ಜೆಟ್ಟಿ ಇರು
ವುದರಿಂದ ವಿಸ್ತರಣೆ ಕಾಮಗಾರಿ ಸಂದರ್ಭ ದಲ್ಲಷ್ಟೆ ತೇಲುವ ಜೆಟ್ಟಿ ನಿರ್ಮಾಣ ಸಾಧ್ಯ. ಕಿರು ಬಂದರು ಪ್ರದೇಶಗಳಲ್ಲಿ ತೇಲುವ ಜೆಟ್ಟಿಗಳ ನಿರ್ಮಾಣದಿಂದ ನಾಡದೋಣಿ ಮೀನುಗಾ ರಿಕೆಗೆ ಹೆಚ್ಚು ಉಪಯೋಗವಾಗಲಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು.

ಗುರುಪುರ ನದಿಯಲ್ಲಿ
11 ತೇಲುವ ಜೆಟ್ಟಿ
ಕೇಂದ್ರ ಸರಕಾರದ ಸಾಗರ ಮಾಲಾ ಯೋಜನೆಯಡಿ ದ.ಕ. ಜಿಲ್ಲೆಯ ಗುರುಪುರ ನದಿಯಲ್ಲಿ ದೋಣಿ ಹಾಗೂ ಇತರ ನಾವೆಗಳು (ಪ್ರವಾಸೋದ್ಯಮ ಉದ್ದೇಶ) ತಂಗಲು ಸುಮಾರು 44.61 ಕೋ.ರೂ. ವೆಚ್ಚದಲ್ಲಿ 11 ತೇಲುವ ಜೆಟ್ಟಿ ನಿರ್ಮಾಣವಾಗಲಿದೆ.

ಜಪ್ಪಿನಮೊಗರು ಹಳೇ ಕಡ (ದಾರಿ), ಕಸಬಾ ಬೆಂಗ್ರೆ ಕಡ, ಮಂಗಳೂರು ತಾಲೂಕಿನ ಉತ್ತರ ಬದಿಯ ಸ್ಯಾಂಡ್‌ಬಾರ್‌, ಬಂದರು ಕಡ, ಹಳೇ ಬಂದರು, ಸುಲ್ತಾನ್‌ ಬತ್ತೇರಿ, ಸ್ಯಾಂಡ್‌ಪಿಟ್‌ ಬೆಂಗ್ರೆ, ಜಪ್ಪಿನಮೊಗರು ರಾ.ಹೆ. ಸೇತುವೆ, ಕೂಳೂರು ಸೇತುವೆ ಸಮೀಪ, ಬಂಗ್ರಕೂಳೂರು ಹಾಗೂ ತಣ್ಣೀರುಬಾವಿ ಚರ್ಚ್‌ ಸಮೀಪ ಬರ್ತಿಂಗ್‌ ಸೌಲಭ್ಯ ಒದಗಿಸುವುದು ಸೇರಿದಂತೆ 11 ಕಡೆಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣವಾಗಲಿದೆ.

Advertisement

ಪ್ರಸ್ತಾವನೆ ಸಲ್ಲಿಕೆ
ಉಡುಪಿ ಜಿಲ್ಲೆಯ ಹಂಗಾರಕಟ್ಟೆ, ಮರವಂತೆ, ಗಂಗೊಳ್ಳಿ, ಮಲ್ಪೆ ಸಹಿತವಾಗಿ ಐದಾರು ಕಡೆಗಳಲ್ಲಿ ತೇಲುವ ಜೆಟ್ಟಿ ನಿರ್ಮಾಣ ಸಂಬಂಧ ಮೀನುಗಾರಿಕೆ ಇಲಾಖೆಯು ಪ್ರವಾಸೋದ್ಯಮ ಇಲಾಖೆಯ ಜತೆ ಸೇರಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಸರಕಾರದಿಂದ ಈವರೆಗೂ ಅನುಮೋದನೆ ಸಿಕ್ಕಿಲ್ಲ. ಸಾಗರಮಾಲಾ ಯೋಜನೆಯಡಿ ಈ ಕಾಮಗಾರಿ ನಡೆಯಲಿರುವುದರಿಂದ ಕೇಂದ್ರ ಸರಕಾರವೇ ಅನುದಾನ ಒದಗಿಸಲಿದೆ.

ಅನುಕೂಲ
ಸಮುದ್ರದಲ್ಲಿ ಉಬ್ಬರ ಇಳಿತ ಸಂದರ್ಭದಲ್ಲಿ ಬಂದರು ಪ್ರದೇಶದಲ್ಲೂ ನೀರಿನ ಏರಿಕೆ ಮತ್ತು ಇಳಿಕೆ ಇರುತ್ತದೆ. ನೀರಿನ ಇಳಿದಾಗ ಜೆಟ್ಟಿ ಎತ್ತರದಲ್ಲಿಇರುವಂತೆ ಕಾಣುತ್ತದೆ. ಆಗ ಸಣ್ಣ ದೋಣಿಗಳಿಂದ ಮೀನು ಖಾಲಿ ಮಾಡುವುದು ಕಷ್ಟ. ನೀರು ಕಡಿಮೆಇದ್ದಾಗಲೂ ಮೀನು ಖಾಲಿ ಮಾಡಲು ಅನುಕೂಲ ವಾ ಗು ವಂತೆ ತೇಲುವ ಜೆಟ್ಟಿ ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಏನಿದು ತೇಲುವ ಜೆಟ್ಟಿ ?
ಮೀನುಗಾರಿಕೆ ದೋಣಿಗಳು ತಂಗಲು ಎಲ್ಲ ಬಂದರುಗಳಲ್ಲೂ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಮೀನುಗಾರರು ತಂದ ಮೀನುಗಳನ್ನು ದೋಣಿಯಿಂದ ಮೇಲೆತ್ತಿ ಬಂದರಿನ ಹರಾಜು ಪ್ರಾಂಗಣಕ್ಕೆ ಕೊಂಡೊಯ್ಯಲು ಅಥವಾ ಹರಾಜು ಆದ ಅನಂತರದಲ್ಲಿ ದೋಣಿಯಿಂದ ಮೀನನ್ನು ನೇರವಾಗಿ ಮಾರುಕಟ್ಟೆಗೆ ಸಾಗಿಸಲು ಅನುಕೂಲ ಆಗುವಂತೆ ನಿರ್ಮಿಸಿರುವ ದೋಣಿ ತಂಗುದಾಣವೇ ಜೆಟ್ಟಿ.

ಉಡುಪಿ ಜಿಲ್ಲೆಯಿಂದ ನಾಲ್ಕೈದು ಕಡೆಗಳಲ್ಲಿ ತೇಲುವ ಜೆಟ್ಟಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈವರೆಗೂ ಅನುಮೋದನೆ ಸಿಕ್ಕಿಲ್ಲ. ದ.ಕ. ಜಿಲ್ಲೆಯಲ್ಲಿ ಹೊಗೆ ಬಜಾರ್‌ನಲ್ಲಿ ತೇಲುವ ಜೆಟ್ಟಿ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ತೇಲುವ ಜೆಟ್ಟಿಯಿಂದ ಮೀನುಗಾರರಿಗೆ ಅನುಕೂಲವಾಗಿದೆ.
– ಟಿ. ಅಂಜನಾದೇವಿ, ದಿಲೀಪ್‌,
ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ, ದ.ಕ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next