Advertisement
ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಭತ್ತ ಬಿತ್ತನೆ ಮಾಡಲಾಗಿದೆ. ಯಾಂತ್ರಿಕೃತ ವ್ಯವಸ್ಥೆ ಬರುವ ಮೊದಲು ಊರಿನವರು ಸೇರಿ ಕೊಯ್ಲು ಮಾಡುವ ಪ್ರಕ್ರಿಯೆ ಇತ್ತು. ಅನಂತರ ಅದನ್ನು ಮನೆಗೆ ಅಂಗಳಕ್ಕೆ ತಂದು ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸಲಾಗುತ್ತಿತ್ತು. ಈ ಪ್ರಕ್ರಿಯೆ ಒಂದು ತಿಂಗಳು ಕಾಲ ಊರಲ್ಲಿ ನಡೆಯುತ್ತಿತ್ತು. ಇದೀಗ ನೇಜಿ ಹಾಗೂ ಕೊಯ್ಲುಗೆ ಯಂತ್ರವೇ ಬಂದಿರುವುದರಿಂದ ಒಂದೇ ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತಿದೆ.ಅಂದೇ ಮಿಲ್ಗೆ ಕೊಂಡೊಯ್ಯುವುದು
Related Articles
ಭತ್ತವನ್ನು ಮುಂಗಾರು ಮತ್ತು ಹಿಂಗಾರಿನಲ್ಲಿ ಸಮ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಬಹುತೇಕರು ಹಿಂಗಾರಿನಲ್ಲಿ ಭತ್ತದ ಬದಲಿಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ನೆಲಕಡಲೆ, ಉದ್ದು, ಹೆಸರುಬೇಳೆ ಇತ್ಯಾದಿಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಂದಾಪುರ, ಬೈಂದೂರು ಭಾಗದಲ್ಲಿ ನೆಲಕಡಲೆ ಹೆಚ್ಚು ಬೆಳೆಯಲಾಗುವುತ್ತದೆ. ಈ ಅವಧಿಯಲ್ಲಿ ಕೆಲವು ರೈತರು ಕಲ್ಲಂಗಡಿ ಅಥವಾ ತರಕಾರಿ ಬೆಳೆಯುತ್ತಾರೆ.
Advertisement
ಸಂಜೆಯೊಳಗೆ ಕಟಾವು ಪೂರ್ಣಬೆಳಗ್ಗೆಯಿಂದ ಸಂಜೆಯೊಳಗೆ ಎಕ್ರೆಗಟ್ಟಲೆ ಗದ್ದೆಯ ಕೊಯ್ಲನ್ನು ಯಂತ್ರ ಪೂರೈಸಿ, ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸಲಿದೆ. ಭತ್ತವನ್ನು ಅದೇ ದಿನ ಮಿಲ್ಗಳಿಗೆ ಕೊಂಡೊಯ್ಯಲಾಗುತ್ತದೆ. ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಬೈಂದೂರು ಹಾಗೂ ಕಾಪು ತಾಲೂಕಿನಾದ್ಯಂತ ಕೊಯ್ಲು ನಡೆಯುತ್ತಿದೆ. ಹಿಂದೆಲ್ಲ ಅನೇಕರು ಸೇರಿ ಮಾಡುತ್ತಿದ್ದ ಕಾರ್ಯವನ್ನು ಈಗ ಒಂದು ಯಂತ್ರ ಮಾಡುತ್ತಿದೆ. ಕಾರ್ಮಿಕರು ಸಿಗುತ್ತಿಲ್ಲ ಮತ್ತು ಸ್ಥಳೀಯರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಗಂಟೆಗೆ 2,400ರಿಂದ 2,500 ರೂ. ನೀಡಿ ಯಂತ್ರದ ಮೂಲಕ ಕಟಾವು ಮಾಡಿಸಲಾಗುತ್ತಿದೆ. ಹುಲ್ಲು ಸುತ್ತುವ ಯಂತ್ರವೂ ಬಂದಿರುವುದರಿಂದ ಕಟಾವಾದ ತತ್ಕ್ಷಣವೇ ಹುಲ್ಲನ್ನು ಸುತ್ತಿ ಅದನ್ನು ಮಾರಾಟ ಮಾಡಲಾಗುತ್ತದೆ. ಮನೆಯಲ್ಲಿ ಹಸು ಸಾಕುವವರು ಹುಲ್ಲನ್ನು ಮಾರಾಟ ಮಾಡದೇ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ.