Advertisement
ಬಡಗಬೆಟ್ಟುವಿನ ಕುಮಾರ್ ವಂಚನೆಗೆ ಒಳಗಾದವರು. ಆಗಸ್ಟ್ ಮೊದಲ ವಾರದಲ್ಲಿ ಆರೋಪಿಗಳು ಕುಮಾರ್ ಅವರನ್ನು ಆನ್‌ಲೈನ್ ಷೇರು ಟ್ರೇಡಿಂಗ್ ಮಾಡುವಂತೆ ಪ್ರಚೋದಿಸಿದ್ದರು. ಅನಂತರ Ahankit Securities ಆ್ಯಪ್‌ನ ಲಿಂಕ್ ಅನ್ನು ಡೌನ್‌ಲೋಡ್ ಮಾಡಿಸಿಕೊಂಡು ಒಟ್ಟು 1,38,000 ರೂ.ಗಳನ್ನು ಹಂತಹಂತವಾಗಿ ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಪಡೆದ ಹಣ ಅಥವಾ ಲಾಭಾಂಶವನ್ನು ನೀಡದೆ ವಂಚನೆ ಎಸಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Udupi: ಅಧಿಕ ಲಾಭದ ಆಮಿಷ; ಲಕ್ಷಾಂತರ ರೂ. ವಂಚನೆ
08:43 PM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.