Advertisement

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

12:49 AM Sep 30, 2024 | Team Udayavani |

ಉಡುಪಿ: ಮೃತರ ಹೆಸರಿನಲ್ಲಿದ್ದ ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಮೆರಿಕದಲ್ಲಿ ನೆಲೆಸಿರುವ ಲಲಿತಾ ರಾವ್‌ ಅವರ ಪತಿ ಅಶೋಕ್‌ ಕಾರ್ಕಳದಲ್ಲಿ ವಾಸವಾಗಿದ್ದವರು. ಇವರು 2020ರ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕಾರ್ಕಳದಲ್ಲಿ ಮೃತಪಟ್ಟಿದ್ದರು. ಮೃತರ ಪತ್ನಿ ಮತ್ತು ಮಕ್ಕಳು ಅಮೆರಿಕದಲ್ಲಿ ಇದ್ದ ಕಾರಣ ಅಶೊಕ್‌ ಅವರ ಅಂತಿಮ ಸಂಸ್ಕಾರವನ್ನು ಮೃತರ ಸಹೋದರನ ಮಗ ನವೀನ್‌ ನಡೆಸಿದ್ದರು.

ಅಶೋಕ್‌ ಜು. 13ರಂದು ಮೃತಪಟ್ಟಿದ್ದರೂ ಮೃತರ ಅಣ್ಣ ಮೋಹನ್‌ ಅವರ ಮಗ ದಿನೇಶ್‌ 2020ರ ಜು.15ರಿಂದ ಆ.18ರ ಅವಧಿಯಲ್ಲಿ ಮೃತ ಅಶೋಕ್‌ಗೆ ಸೇರಿದ ವಿವಿಧ ಕಂಪೆನಿಗಳ ಒಟ್ಟು 4,24,90,548.90 ರೂ. ಮೌಲ್ಯದ ಷೇರು
ಗಳನ್ನು ಮೃತರ ಮೊಬೈಲ್ ಮತ್ತು ಈ-ಮೇಲ್ ಐಡಿ ದುರ್ಬಳಕೆ ಮಾಡಿ ಮಾರಾಟ ಮಾಡಿರುವುದಾಗಿ ದೂರಲಾಗಿದೆ.

ಇವರು ಮೃತರ ಉತ್ತರದಾಯಿತ್ವ ಪ್ರಮಾಣ ಪತ್ರವನ್ನು ಪಡೆಯದೆ ನಾಮನಿರ್ದೇಶನದ ಸುಳ್ಳು ದಾಖಲಾತಿ ಯನ್ನು ಸೃಷ್ಟಿಸಿ, ದಾಖಲಾತಿಯನ್ನು ನೈಜವಾದುದ್ದೆಂದು ಷೇರು ಬ್ರೋಕರ್‌ ಕಂಪೆನಿ ಮತ್ತು ಬ್ಯಾಂಕಿನ ಉದ್ಯೋಗಿಗಳೊಂದಿಗೆ ಶಾಮೀಲಾಗಿ, ಮೃತರ ಖಾತೆಯಿಂದ ತನ್ನ ಖಾತೆಗೆ ಹಣವನ್ನು ಜಮೆ ಮಾಡಿದ್ದಾರೆ. ಇದರಲ್ಲಿ ಷೇರುಗಳ ಮಾರಾಟದಿಂದ ಸಂಗ್ರಹವಾದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next