Advertisement

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

08:42 PM Sep 21, 2024 | Team Udayavani |

ಸುಳ್ಯ: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವ್ಯಕ್ತಿಯೋರ್ವರಿಗೆ ಅಪರಿಚಿತರು ಲಕ್ಷಾಂತರ ರೂ. ವಂಚಿಸಿರುವ ಘಟನೆ ಸುಳ್ಯದ ಬಾಳಿಲದಲ್ಲಿ ನಡೆದಿದೆ.

Advertisement

ಬಾಳಿಲ ಗ್ರಾಮದ ಕೃಷಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು ಈ ಬಗ್ಗೆ ಸೈಬರ್‌ (ಸೆನ್‌) ಠಾಣೆಗೆ ದೂರು ನೀಡಿದ್ದಾರೆ. ಸೆ.1ರಂದು ಬಾಳಿಲದ ವ್ಯಕ್ತಿ ಆನ್‌ಲೈನ್‌ ಮೂಲಕ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಮಾಡಿದ್ದು, ಸೆ.12ರಂದು ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಅಂಚೆ ಮುಖಾಂತರ ಬಂದಿರುತ್ತದೆ. ಸೆ.13ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಕ್ರೆಡಿಟ್‌ ಕಾಡ್‌ ಮುಂಬಯಿ ಕಚೇರಿಯಿಂದ ಎಂದು ತಿಳಿಸಿ, ಅದನ್ನು ಆ್ಯಕ್ಟಿವೇಶನ್‌ ಮಾಡಲು ಸಿವಿವಿ ನಂಬರ್‌, ಒಟಿಪಿ ನೀಡಲು ತಿಳಿಸಿದ್ದು, ಅದರಂತೆ ಬಾಳಿಲದ ವ್ಯಕ್ತಿ ಅಪರಿಚಿತರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಳಿಲದ ವ್ಯಕ್ತಿಯ ಕ್ರೆಡಿಟ್‌ ಕಾರ್ಡ್‌ನಿಂದ ಹಂತ ಹಂತವಾಗಿ ಒಟ್ಟು 3,94,361 ರೂ. ವರ್ಗಾವಣೆಯಾಗಿದೆ. ಈ ಬಗ್ಗೆ ಅವರು ಮಂಗಳೂರಿನ ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next