Advertisement
ಉಡುಪಿ: ಆಹಾರ ನಿಯಮ, ನಿದ್ರಾ ನಿಯಮ ವನ್ನು ಎಲ್ಲರೂ ಪಾಲಿಸಲುಬೇಕಾದ ಜೀವನದ ಎಲ್ಲ ಆಯಾಮಗಳನ್ನೂ ಪರಿಷ್ಕರಿಸುವ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು ಎಂದು ಕೊರೊನಾ ಸೋಂಕನ್ನು ಎದುರಿಸಿ ಬಂದಿರುವ 59ರ ಹರೆಯದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
Related Articles
ರಾತ್ರಿ 8ರೊಳಗೆ ಮಲಗಿ ಬೆಳಗ್ಗೆ 4 ಗಂಟೆಯೊಳಗೆ ಎದ್ದರೆ ಪರಿಪೂರ್ಣ ನಿದ್ರೆ ದೇಹಕ್ಕೆ ಸಿಗುತ್ತದೆ. ರಾತ್ರಿ ಬೇಗ ಮಲಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕೆಂಬ ಶಾಸ್ತ್ರದ ನಿಯಮವೂ ಇದೆ. ಈ ಅವಧಿಯಲ್ಲಿ ಚಟುವಟಿಕೆಯಲ್ಲಿದ್ದರೆ ಆಗ ಜಾಗೃತವಾಗಿರುವ ವೈರಾಣುಗಳು ದಾಳಿ ಮಾಡುತ್ತವೆ. ಈ ಸಮಯವನ್ನು ರಾಕ್ಷಸ ಕಾಲ ಎಂದು ಶಾಸ್ತ್ರಗಳು ಕರೆದಿವೆ. ಸ್ವಾಮೀಜಿಯವರು ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಸೂರ್ಯಾಸ್ತಮಾನದೊಳಗೆ ಆಹಾರ ಸೇವಿಸಿ 8 ಗಂಟೆಯೊಳಗೆ ಮಲಗುತ್ತಿದ್ದರು. ಬೆಳಗ್ಗೆ ಎದ್ದಾಗ ಕೆಮ್ಮು ಸಮಸ್ಯೆ ಉಂಟಾದರೆ ರಾತ್ರಿ 8 ಗಂಟೆಗೆ ಮಲಗಿ ಸಮಸ್ಯೆ ನಿವಾರಿಸಿಕೊಂಡ ಅನುಭವವೂ ಅವರಿಗಿದೆ. ಆದರೆ ರಾತ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ತಡವಾಗಿ ಬರುವುದು ಇತ್ಯಾದಿ ಕಾರಣಗಳಿಂದ ವಿಶ್ರಾಂತಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗುತ್ತಿರಲಿಲ್ಲ.
Advertisement
ಜೀವನಶೈಲಿ ಬದಲಾವಣೆ ಮುಖ್ಯಕೊರೊನಾಕ್ಕೆ ಲಸಿಕೆ, ಔಷಧ ಕಂಡು ಹಿಡಿಯಲಿ. ಆದರೆ ದೇಹದ ಪ್ರತಿರೋಧ ಶಕ್ತಿಯನ್ನು ಕುಂಠಿತಗೊಳಿಸುವ ಜೀವನ ಶೈಲಿಯನ್ನು ಬದಲಾಯಿಸದೆ ಇದ್ದರೆ ಯಾವ ಔಷಧವೂ ಪ್ರಯೋಜನಕ್ಕೆ ಬಾರದು ಎಂಬುದು ಶ್ರೀಗಳ ಅಭಿಪ್ರಾಯ. ರಾಷ್ಟ್ರೀಯ ವಿಶ್ರಾಂತಿ ಸಮಯ ಸಂಜೆ ತಡವಾಗಿ ಕೆಲಸದಿಂದ ನಿರ್ಗಮಿಸಿದರೆ ರಾತ್ರಿ ಮಲಗುವಾಗಲೂ ತಡವಾಗುತ್ತದೆ. ಆದ ಕಾರಣ ಬೆಳಗ್ಗೆ 10ಕ್ಕೆ ಆರಂಭವಾಗುವ ಕೆಲಸದ ಸಮಯವನ್ನು ಪರಿಷ್ಕರಿಸಿ ಸಂಜೆ 4 ಗಂಟೆಯೊಳಗೆ ಮುಗಿಯುವಂತೆ ರೂಪಿಸಬೇಕು. ಸೂರ್ಯಾಸ್ತಮಾನದ ಬಳಿಕ ಚಟುವಟಿಕೆ ಕಡಿಮೆಯಾಗಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಡುತ್ತಾರೆ. ಅಮೆರಿಕದಲ್ಲೇಕೆ ಶತಾಯುಷಿಗಳು ಹೆಚ್ಚು?
ಅಮೆರಿಕ, ಜಪಾನ್‌ಗಳಲ್ಲಿ ಶತಾಯುಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ಕಾರಣ ಗೊತ್ತೆ? ಅವರು ಸಂಜೆ 5ರ ವೇಳೆಗೆ ಭರ್ಜರಿ ಊಟ ಮಾಡಿ ರಾತ್ರಿ 8ಕ್ಕೇ ಮಲಗಿಬಿಡುತ್ತಾರೆ. ಅವರ ಇತರ ಆಚಾರ ವಿಚಾರಗಳು ಹೇಗಿದ್ದರೂ ನಿದ್ರಾ ನಿಯಮ ಮಾತ್ರ ಕಟ್ಟುನಿಟ್ಟು. ಅದುವೇ ಅವರ ಶತಾಯುಷ್ಯದ ಗುಟ್ಟು. ದೇಹದ ಸಂವಿಧಾನ
ಕೊರೊನಾದಿಂದ ಚೀನಕ್ಕೆ ಧೈರ್ಯ ಬಂದಿದೆ. ಪಾಕಿಸ್ಥಾನದೊಂದಿಗೆ ಸೇರಿಕೊಂಡು ಜೈವಿಕ ಅಸ್ತ್ರ ಪ್ರಯೋಗಿಸುವ ಸ್ಥಿತಿಯಲ್ಲಿದೆ. ಬಲಿಷ್ಠ ಭಾರತಕ್ಕಾಗಿ ನಮ್ಮ ಪ್ರಜೆಗಳು, ಸೈನಿಕರಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸುವಂತಹ ಜೀವನಶೈಲಿ ರೂಪಿಸಬೇಕು. ಸೂರ್ಯಾಸ್ತದ ಬಳಿಕ ಚಟುವಟಿಕೆ ಕಂಡುಬಂದರೆ ದಂಡ ವಿಧಿಸಬೇಕು. ದೇಹಕ್ಕೂ ಒಂದು ಸಂವಿಧಾನವಿದ್ದು ಅದನ್ನು ಉಲ್ಲಂ ಸಿ ದರೆ ಅಪಾಯ. ಪೂರ್ವಜರಂತೆ ಜೀವನ ಶೈಲಿ ರೂಪಿಸಿ ಕೊಳ್ಳುವುದು ಎಲ್ಲ ವಿಧದಿಂದಲೂ ಒಳ್ಳೆಯದು. ಕೊರೊನಾ ಶ್ರಮಿಕ ವರ್ಗಕ್ಕೆ ಹೆಚ್ಚು ಅಪಾಯಕಾರಿಯಾಗದೆ ಇರುವುದನ್ನೂ ಗಮನಿಸಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಂತೆ ರಾಷ್ಟ್ರೀಯ ಆರೋಗ್ಯ ನೀತಿಯನ್ನೂ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಬೇಕು ಎನ್ನುತ್ತಾರೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು. ಭಗವದ್ಗೀತೆಯಲ್ಲಿ ಯುಕ್ತಾಹಾರ ವಿಹಾರಸ್ಯ… ಎಂದು ಶ್ರೀಕೃಷ್ಣ ಹೇಳಿದ್ದಾನೆ. ಆಹಾರ ಮತ್ತು ನಿದ್ರೆಯಂತಹ ನಿಸರ್ಗ ವಿಧಿಸಿದ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಬೇಕೆನ್ನುವುದು ಇದರ ಅರ್ಥ. ಇದು ಗೊತ್ತಿದ್ದರೂ ಪಾಲಿಸಲು ಸಾಧ್ಯವಾಗಲಿಲ್ಲ. ನಿಷೇಧಿತ ಸಮಯದಲ್ಲಿ ಎಲ್ಲರೂ ಚಟುವಟಿಕೆಯಲ್ಲಿದ್ದಾಗ ಉಳಿದವರೂ ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸೂರ್ಯಾಸ್ತದೊಳಗೆ ಆಹಾರ ಸ್ವೀಕಾರ, ರಾತ್ರಿ 8 ಗಂಟೆಯಿಂದ ಬೆಳಗ್ಗೆ 4 ಗಂಟೆ ವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯ ಎಂಬ ಶಾಸನಾತ್ಮಕ ನೀತಿಯನ್ನು ಘೋಷಿಸಬೇಕು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ