ಪಂಡಿತರು ಯಾರ ದುಃಖವನ್ನೂ ತನ್ನ ದುಃಖವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಸುಖದುಃಖಗಳು ಕರ್ಮಾನುಸಾರ ಬರುವಂಥದ್ದು ಎಂದು ತಿಳಿದಿರುತ್ತದೆ. ಕೇವಲ ದುಃಖಪಟ್ಟರೆ ಏನೂ ಪ್ರಯೋಜನವಿಲ್ಲ. ಇನ್ನೊಬ್ಬರಿಗೆ ಕಷ್ಟ ಬಂದಾಗ ಎಷ್ಟೋ ಜನ ದುಃಖ ವ್ಯಕ್ತಪಡಿಸುತ್ತಾರೆ, ಆದರೆ ಏನನ್ನಾದರೂ ನೆರವು ನೀಡುತ್ತಾರಾ? ಆದ್ದರಿಂದ ಕೇವಲ ದುಃಖಪಟ್ಟರೆ ಏನೂ ಪ್ರಯೋಜನವಿಲ್ಲ.
ಪಂಡಿತರು ದುಃಖಶಮನಕ್ಕೆ ಪ್ರಯತ್ನಿಸಿದರೆ, ಪಾಮರರು ಮತ್ತಷ್ಟು ದುಃಖಪಡುತ್ತ ದುಃಖಿತರ ದುಃಖವನ್ನು ದುಪ್ಪಟ್ಟು ಮಾಡುತ್ತಾರೆ. ದುಃಖವನ್ನು ಕೊಟ್ಟದ್ದು ಯಾರು? ದೇವರಲ್ಲವೆ? ಹಾಗಿದ್ದರೆ ದೀನರಿಗೆ ಸಹಾಯ ಮಾಡುವುದು ತಪ್ಪೆ? ದೇವರೆನ್ನುತ್ತಾನೆ “ಸಹಾಯ ಮಾಡುವ ಕೆಲಸ ನಿನ್ನದು, ಉಳಿದದ್ದು ನನ್ನ ಕೆಲಸ. ನಿನ್ನ ಕೆಲಸ ಮಾಡಿ ಪುಣ್ಯಕಟ್ಟಿಕೋ’.
ಸಂಚಾರ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ಹಾಕುವ ಅಧಿಕಾರ ಪೊಲೀಸರಿಗೆ ಮಾತ್ರ, ಸಿಕ್ಕಸಿಕ್ಕವರಿಗೆ ಇಲ್ಲ. ಸೀತಾಪಹರಣವಾದಾಗ ರಾಮನಿಂದ ನಿರ್ದೇಶಿತನಾದ ಆಂಜನೇಯ ತನಗೆ ಶಕ್ತಿ ಇದ್ದರೂ ಸೀತೆಯನ್ನು ಹಿಂದಕ್ಕೆ ಕರೆದುಕೊಂಡು ಬರುವ ಕೆಲಸಕ್ಕೆ ಕೈಹಾಕಲಿಲ್ಲ. ಆ ಕೆಲಸವನ್ನು ರಾಮಚಂದ್ರನಿಗೇ ಬಿಟ್ಟ. ಆದ್ದರಿಂದ ನಾವು ದೇವರ ಚಿತ್ತವರಿಯಬೇಕು. ಜೈಲಿನಲ್ಲಿದ್ದವನನ್ನು ಕಾನೂನುಬಾಹಿರವಾಗಿ ಬಿಡಿಸಲು ಹೋಗುವುದು ತಪ್ಪು, ಆದರೆ ಮಾನವೀಯ ದೃಷ್ಟಿಯಿಂದ ಆತನ ಆರೋಗ್ಯಕ್ಕೆ ನೆರವಾಗುವುದನ್ನು ಮಾಡಲೇಬೇಕು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811