Advertisement
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ಗೀತಾ ಜಯಂತಿ ಮತ್ತು ಕೋಟಿ ಗೀತಾ ಲೇಖನ ಯಜ್ಞದ ಪ್ರಯುಕ್ತ ಜರಗಿದ “ಗೀತೋತ್ಸವ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಗೀತಾ ಲೇಖನ ಯಜ್ಞಕ್ಕೆ ಕಾಂಚೀ ಕಾಮಕೋಟಿ ಪೀಠದ ಸಹಕಾರ ನೀಡುವುದಾಗಿ ತಿಳಿಸಿದರು.
Related Articles
Advertisement
ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ| ಭೀಮೇಶ್ವರ ಜೋಷಿ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ವಿಜಯ ಬಲ್ಲಾಳ್, ಕಟೀಲು ಕ್ಷೇತ್ರದ ಹರಿನಾರಾಯಣ ಆಸ್ರಣ್ಣ, ಆನೆಗುಡ್ಡೆ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್, ಉದ್ಯಮಿ ಭುವನೇಂದ್ರ ಕಿದಿಯೂರು, ಚಿಂತಕ ರೋಹಿತ್ ಚಕ್ರತೀರ್ಥ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ಕುಮಾರ್ ಕಲ್ಕೂರ, ಸಂಘಟಕ ಭುವನಾಭಿರಾಮ ಉಡುಪ ಅತಿಥಿ ಗಳಾಗಿದ್ದರು. ಕಾಂಚೀ ಹಾಗೂ ಪುತ್ತಿಗೆ ಮಠದ ಅಧಿಕಾರಿ ಗಳು, ವಿದ್ವಾಂಸರು ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಸ್ವಾಗತಿಸಿ, ಷಣ್ಮುಖ ಹೆಬ್ಬಾರ್ ಅಭಿನಂದನ ಪತ್ರ ವಾಚಿಸಿದರು.
ಗೀತಾ ಪ್ರಸಾರದಿಂದ ಭಾರತ ವಿಶ್ವಗುರು: ಪುತ್ತಿಗೆ ಶ್ರೀ
ಕೇವಲ ಆರ್ಥಿಕ ಅಭಿವೃದ್ಧಿಯಿಂದ ಭಾರತ ವಿಶ್ವಗುರುವಾಗುವುದು ಸಾಧ್ಯವಿಲ್ಲ, ಪಾರಮಾರ್ಥಿಕ ಅಭಿವೃದ್ಧಿಯೂ ಆಗಬೇಕು. ಶ್ರೀಕೃಷ್ಣನ ಭಗವದ್ಗೀತೆಯು ಜಗದಗಲದಲ್ಲಿ ಪಸರಿದಾಗ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಶ್ರೀಕೃಷ್ಣ ಅರ್ಜುನನಿಗೆ ಮಾತ್ರ ಗೀತೋಪದೇಶ ಮಾಡಿದ್ದಲ್ಲ. ಆತನ ರಥದಲ್ಲಿದ್ದ ಆಂಜನೇಯನಿಗೂ ಉಪದೇಶ ಮಾಡಿದ್ದ. ವಿಜಯೇಂದ್ರ ಅಂದರೆ ಹನುಮಂತ ಎಂಬರ್ಥವಿದೆ. ಈ ಹಿನ್ನೆಲೆಯಲ್ಲಿ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಗೀತೋತ್ಸವವನ್ನು ಉದ್ಘಾಟಿಸಿರುವುದು ಅತ್ಯಂತ ಸೂಕ್ತ ಎಂದರು.
ಸ್ವಾಮೀಜಿಯವರ ಹೆಸರು “ಇಂದ್ರ’
ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ವಿದ್ಯಾಗುರುಗಳಾದ ಪಲಿಮಾರು-ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥರ ಸನ್ಯಾಸಾಶ್ರಮದ ಶತಮಾನೋತ್ಸವದ ದಿನ ಇದೇ (1925ರ ಕಾರ್ತಿಕ ಕೃಷ್ಣ ಪಂಚಮೀ) ಆಗಿದೆ. ಕಾಂಚಿ ಮಠ (ಶ್ರೀಜಯೇಂದ್ರ, ಶ್ರೀಶಂಕರ ವಿಜಯೇಂದ್ರ) ಮತ್ತು ಪುತ್ತಿಗೆ ಮಠದ (ಶ್ರೀಸುಧೀಂದ್ರ, ಶ್ರೀಸುಜ್ಞಾನೇಂದ್ರ, ಶ್ರೀಸುಗುಣೇಂದ್ರ, ಶ್ರೀಸುಶ್ರೀಂದ್ರ) ಸ್ವಾಮೀಜಿಯವರ ಹೆಸರು “ಇಂದ್ರ’ ಶಬ್ದದಿಂದ ಇದೆ. ಶ್ರೀಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಹಿಂದಿನ ಪರ್ಯಾಯದಲ್ಲಿ ಆಗಮಿಸಿದ್ದರು. ಶ್ರೀಶಂಕರವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಈಗ ಗೀತೋತ್ಸವವನ್ನು ಉದ್ಘಾಟಿಸಿದರು. ಶ್ರೀಸುಗುಣೇಂದ್ರತೀರ್ಥರು ಹಿಂದೆ ಕಾಂಚಿಗೆ ಭೇಟಿ ನೀಡಿದ್ದರು.