ಭಗವದ್ಗೀತೆಯ ಸಾರವೇನು? ಧರ್ಮ ಎಂದರೇನು? ಒಂದು ವಾಕ್ಯದಲ್ಲಿ ವಿವರಿಸಿ- ಪ್ರಶ್ನೆ.
“ಸ್ವವಿಹಿತ ವೃತ್ಯಾ ಭಕ್ತ್ಯಾ ಭಗವದಾರಾಧನಮೇವ ಪರಮೋಧರ್ಮಃ’ =”ನಮ್ಮ ಪಾಲಿಗೆ ಬಂದ ಕೆಲಸವನ್ನು ಭಗವಂತನ ಪೂಜೆ ಎಂದು ಭಕ್ತಿಯಿಂದ ಮಾಡುವುದು ಅತಿ ಶ್ರೇಷ್ಠವಾದ ಧರ್ಮ’- ಉತ್ತರ.
ಸಂಸ್ಕೃತ ಬಾರದ ಸಾಮಾನ್ಯರಿಗೂ ಅರ್ಥವಾಗುವಂತೆ ಶ್ರೀಮದಾಚಾರ್ಯರು ಅರ್ಥಗರ್ಭಿತವಾಗಿ ಗೀತಾ ಭಾಷ್ಯದಲ್ಲಿ ಈ ಶ್ಲೋಕವನ್ನು ಉಲ್ಲೇಖಿಸಿದ್ದಾರೆ. ಅರ್ಜುನನಿಗೆ ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಕೊಟ್ಟ ಸಂದೇಶವೂ ಹೌದು, ನಮಗೆಲ್ಲರಿಗೆ, ಆಧುನಿಕವಾದ ಎಲ್ಲ ಬಗೆಯ ವ್ಯವಹಾರಗಳಿಗೆ ಭಗವಂತ ಕೊಟ್ಟ ಸಂದೇಶವೂ ಹೌದು. ಅವರವರ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ದೇವರಿಗೆ ಪ್ರೀತಿ ಎಂಬಂತೆ ಮಾಡಿದರೆ ಸಾಕು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮಗೆ ಹಂಚಿ ಬಂದ ಕೆಲಸವನ್ನು ಬಿಟ್ಟು ಉಳಿದ ವಿಚಾರಗಳತ್ತಲೇ ಯೋಚಿಸುತ್ತೇವೆ. ಈ ಜಗತ್ತನ್ನು ಸೃಷ್ಟಿಸಿದವ ಯಾರು?- ಭಗವಂತ. ಆತ ಜಗತ್ತು ನಡೆಯಲು ಒಂದು ನಿಯಮವನ್ನು ಮಾಡಿಟ್ಟಿದ್ದಾನೆ. ಭಗವಂತ ಕೊಟ್ಟ ಕಾನೂನನ್ನು ಪಾಲಿಸಿದರೆ ಸಾಕು. ಮನೆಯ ಮುಖ್ಯಸ್ಥ ಹೇಳಿದಂತೆ ಕೇಳಬೇಕಲ್ಲವೆ? ಮನೆ ಮುಖ್ಯಸ್ಥನ ಇಷ್ಟವೇ ರೂಲ್. ಈ ಜಗತ್ತು “ಭಗವಧೀನ’ ಎಂದೊಪ್ಪಿಕೊಳ್ಳಬೇಕು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811