Advertisement

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

01:42 AM Dec 14, 2024 | Team Udayavani |

ಕೌಮಾರ್ಯ, ಯೌವ್ವನ, ಜರಾ ಇವುಗಳ ಸ್ಥಿತ್ಯಂತರ ಬಂದಾಗ ಆತ್ಮನಿಗೆ ಹೇಗೆ ದುಃಖವಾಗಲಿಲ್ಲವೋ ಹಾಗೆಯೇ ಇನ್ನೊಂದು ದೇಹಕ್ಕೆ ಹೋಗುವಾಗಲೂ (ದೇಹಾಂತರ) ದುಃಖವಾಗದು. “ಇರುವುದೇ ಒಂದು ದೇಹ. ಯವ್ವನ, ಜರಾ ಇದ್ದಾಗ ಆತ್ಮನೇನೂ ಬಿಟ್ಟು ಹೋಗಬೇಕಾಗಿಲ್ಲ. ದೇಹಾಂತರವಾಗುವಾಗ ಹಾಗಲ್ಲವಲ್ಲ?’ ಎಂಬ ಪ್ರಶ್ನೆಗೆ “ನೂರಾರು ಜನ್ಮಗಳು ಬಂದಿವೆ. ಹಾಗಿದ್ದರೆ ಯಾರಿಗೋಸ್ಕರ ದುಃಖ? ಈಗಿನದೂ ಒಂದು “ದೇಹಿನಃ’ ಅಷ್ಟೆ. ದೇಹ= “ದೇಹಾಃ ಅಸ್ಯ ಸಂತೀತಿ ದೇಹಿ’.

Advertisement

ಅನೇಕ ದೇಹಗಳನ್ನು ಹಿಂದೆ ಪಡೆದಿದ್ದಿ. ಆಗ ನಿನ್ನ ಜನರು ಯಾರು? ಆದ್ದರಿಂದ ನಿನ್ನ ಜನಗಳೇ ಇಲ್ಲ. ಹಿಂದಿನ ಜನ್ಮದಲ್ಲಿದ್ದ‌ವರು ನಿನ್ನ ಜನಗಳು ಅಲ್ಲವೆ? ಈಗಿನವರು ಮಾತ್ರ ನಿನ್ನ ಜನರೆಂದು ಏಕೆ ಭಾವಿಸುವಿ? ಆದ್ದರಿಂದ ನಿನ್ನದೇ ಎನ್ನುವ ಜನಗಳೇ ಇಲ್ಲ. ಸಾಯುವವರು ಹೋಗಿಯಾಗಿದೆ. ಇದ್ದವರಿಗೆ ಅಲ್ವಾ ದುಃಖ? ನಿನ್ನ ದೇಹಗಳ ಸರಣಿಗಳನ್ನು ಜ್ಞಾಪಿಸು. ಶಾಶ್ವತವಾಗಿ ಹೋದಾಗ ಮಾತ್ರ ದುಃಖೀಸಬೇಕು. ಕೌಮಾರ್ಯ, ಯೌವ್ವನ, ಜರಾದಂತೆ ಬೇರೆ ಬೇರೆ ದೇಹಗಳಲ್ಲಿ ಸರಣಿಯಂತೆ ಬಂದು ಹೋಗುತ್ತವೆ. ಸುಖದುಃಖಗಳು ಬರುತ್ತಲೇ ಇರುತ್ತವೆ. ಮೋಕ್ಷದಲ್ಲಿ ಮಾತ್ರ ಕೇವಲ ಸುಖದ ಸ್ಥಿತಿ. ಜರೆ ಬಂದರೂ ಮುಂದೆ ಕೌಮಾರ್ಯ ಬರುತ್ತದೆಯಲ್ಲವೆ? ಮುಂದಿನದ್ದನ್ನು ನೋಡಿ ನಿಶ್ಚಯ ಮಾಡು’ ಎಂದ ಕೃಷ್ಣ. “ವಾಸಾಂಸಿ ಜೀರ್ಣಾನಿ ಯಥಾ ವಿಹಾಯ’ ಎಂಬ ಪ್ರಸಿದ್ಧ ಶ್ಲೋಕವನ್ನು ಮುಂದೆ ಹೇಳುತ್ತಾನೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next