Advertisement

Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?

08:07 PM Dec 31, 2024 | Team Udayavani |

ಗೀತೆಯ ಒಂದೊಂದು ವಾಕ್ಯವೂ “ಪೂರ್ಣಮದಃ ಪೂರ್ಣಮಿದಂ…’ ಎಂಬಂತೆ ಪರಿಪೂರ್ಣ. ಕೌಮಾರ್ಯ, ವಾರ್ಧಕ್ಯದಂತೆ ದೇಹಾಂತರ ಪ್ರಾಪ್ತಿ ಸಹಜವಾದದ್ದು. ಅಸಹಜವಾದರೆ ಮಾತ್ರ ದುಃಖ ಪಡಬೇಕು. ನೂರು ವರ್ಷವಾಗಿ ಮೃತಪಟ್ಟರೆ ದುಃಖ ಬರುವುದಿಲ್ಲ. ಅಪಘಾತವಾಗಿ ಸತ್ತರೆ ಅಸಹಜ ಎಂದು ದುಃಖವಾಗುತ್ತದೆ. ಕೃಷ್ಣ ಅದನ್ನೂ ಸಹಜ. ಎಲ್ಲವೂ ಸಹಜ ಎನ್ನುತ್ತಾನೆ.

Advertisement

“ಯಾವುದೂ ನನ್ನದಲ್ಲ’ ಎಂದು ಯಾರು ಅನುಸಂಧಾನ ಮಾಡಿ ರಮಿಸುತ್ತಾರೋ ಅವರನ್ನು ಗೀತೆ “ಧೀರ’ ಎಂದು ಕರೆದಿದೆ. ಇದನ್ನು ಒಮ್ಮೆ ಕೇಳಿದರೆ ಆಗುವುದಿಲ್ಲ. ಅಭ್ಯಾಸ ಮಾಡಿದರೆ ದುಃಖವಾಗುವುದಿಲ್ಲ. ಪುನಃ ಪುನಃ ಮಾಡಿದರೆ ಮನಸ್ಸಿನೊಳಗೆ ಹೋಗುತ್ತದೆ. ಅಭ್ಯಾಸೇನ …. ಎಂಬಂತೆ ರಿಪೀಟ್‌ ಮಾಡುವುದರಿಂದ ಸಾಧನೆ ಆಗುವುದು. “ಯಾವುದನ್ನು ರಿಪೀಟ್‌ ಮಾಡುತ್ತಿರೋ ತಾದಾತ್ಮ ಬಂದು ಫ್ಯಾಕ್ಟ್ ಆಗಿ ಕನ್ವರ್ಟ್‌ ಆಗುತ್ತದೆ’ ಎಂದು ಮನಃಶಾಸ್ತ್ರ ಹೇಳುತ್ತದೆ. ಉಪಾಸನಕ್ರಮವೂ ಹೀಗೆ. ಏನು ಉಪಾಸನೆಯೋ ಅದು ಪ್ರಾಪ್ತವಾಗುತ್ತದೆ. ತಪ್ಪಾಗಿ ಉಪಾಸನೆ ಮಾಡಿದರೆ ಮತ್ತೆ ಸರಿಪಡಿಸುವುದು ಕಷ್ಟ. ವಾಹನಗಳಿಗೆ ಗವರ್ನರ್‌ ಅಳವಡಿಸುವುದೇಕೆ/ ಸ್ಪೀಡ್‌ ಲಿಮಿಟ್‌ ಏಕೆೆ? ರಕ್ಷಣೆ ಆಗಬೇಕೆಂದು. ಸ್ಪೀಡ್‌ ಹೋದರೆ ಎಲ್ಲರಿಗೂ ಒಳ್ಳೆಯದೇ, ಆದರೆ ಅಪಾಯವಿದೆ. ಆದ್ದರಿಂದ ಸತ್ಯವನ್ನೇ ಉಪಾಸನೆ ಮಾಡಬೇಕು. ಎಲ್ಲವನ್ನೂ ಸಹಜ, ಎಲ್ಲರಿಗೂ ಈ ಅವಸ್ಥೆಗಳು ಸಮಾನ ಎಂದು ತಿಳಿದರೆ ದುಃಖವಾಗುವುದಿಲ್ಲ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next