Advertisement

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

04:41 PM Dec 20, 2024 | Team Udayavani |

ತೆರಿಗೆ ಕಟ್ಟಿದ ಹಣ ಪವಿತ್ರ. ಅದು ವೈಟ್‌ ಮನಿಯಾಗುತ್ತದೆ. ತೆರಿಗೆ ಕಟ್ಟದ ಹಣ ಅಪವಿತ್ರ. ಅದು ಬ್ಲ್ಯಾಕ್‌ ಮನಿ ಆಗುತ್ತದೆ. ತೆರಿಗೆ ಕಟ್ಟಿದ ಬಳಿಕ ರಾಜಾರೋಷವಾಗಿ ತಿರುಗಬಹುದಲ್ಲ. ದೇವರಿಗೆ ಹೇಳದೆ ತಿಂದರೆ ಬ್ಲ್ಯಾಕ್‌ ಮನಿಯಂತೆ ಆಗುತ್ತದೆ. ಆದ್ದರಿಂದ “ನಂದಲ್ಲ ನಂದಲ್ಲ’ ಎಂದು ಅನುಸಂಧಾನ ನಿರಂತರವಿರಬೇಕು. ಇದರ ಬದಲು ನಾವು “ನಂದು ನಂದು’ ಎನ್ನುತ್ತೇವೆ.

Advertisement

“ನನ್ನದೆಂದರೂ, ನನ್ನದಲ್ಲ’ ಎಂದರೂ ಉಪಯೋಗ ಎರಡೂ ಕಡೆ ಇದೆ. ಸುಖಕ್ಕೇನೂ ಅಡ್ಡಿ ಇಲ್ಲ. ದೇವರದ್ದೆಂದು ತಿಳಿದರೆ ನೆಮ್ಮದಿ ಇರುತ್ತದೆ. ನನ್ನದಲ್ಲದ್ದನ್ನು ನಂದು ನಂದು ಎಂದೇಕೆ ಉಪಯೋಗಿಸಬೇಕು. ವ್ಯವಹಾರದ ಕೌಶಲವೆಂದರೆ ಇನ್ನೊಬ್ಬರ ಓನರ್‌ಶಿಪ್‌ ಒಪ್ಪಿಕೊಳ್ಳುವುದು. ಮಾಲಕರ ಬಳಿ ಕೇಳಿದರೆ ಏನು ತೊಂದರೆ? ದೇವರ ಒಡೆತನ ಒಪ್ಪಿದರೆ ಸಮಸ್ಯೆ ಇಲ್ಲ. ಥ್ಯಾಂಕ್ಸ್‌ (ಕೃತಜ್ಞತೆ) ಹೇಳಲು ಹಿಂಜರಿಕೆ ಏಕೆ? ರಿಯಾಲಿಟಿ ಒಪ್ಪಲು ಸಿದ್ಧರಿರಬೇಕು. ಬಿರುಗಾಳಿ ಸಂದರ್ಭ ನೆಟ್ಟಗೆ ಇರುವ ಮರಗಳು ಉರುಳುತ್ತವೆ, ಚಿಕ್ಕಪುಟ್ಟ ಗಿಡಮರಗಳು (ಬಾಗುವಿಕೆ ಮುಖ್ಯ) ಸುರಕ್ಷಿತವಾಗಿರುತ್ತವೆ.

ದೊಡ್ಡ ಮರಗಳನ್ನು ಗಂಗಾನದಿ ಎಳೆದುಕೊಂಡು ಹೋಗುತ್ತದೆ, ಅಲ್ಲಿ ಅಡೆತಡೆ ಇಲ್ಲ. ನಾರಾಯಣಾಸ್ತ್ರವೂ ಹಾಗೆ. ಬಗ್ಗಿದರೆ ಸುಮ್ಮನಿರುತ್ತದೆ. ಬಲರಾಮ ಭೀಮನ ಮೇಲೆ ನಾರಾಯಣಾಸ್ತ್ರವನ್ನು ಪ್ರಯೋಗಿಸಿದಾಗ ಎಚ್ಚೆತ್ತ ಕೃಷ್ಣ ಶರಣಾಗಲು ಹೇಳಿ ಭೀಮನನ್ನು ಬಚಾವು ಮಾಡಿದ್ದನಲ್ಲ! ಹೀಗೆ ದೇವರ ಸ್ವಾಮಿತ್ವ ಒಪ್ಪಿದರೆ ಯಾವ ಚಿಂತೆಯೂ ಇಲ್ಲ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next