Advertisement

Udupi ಪರ್ಯಾಯೋತ್ಸವ ಕೃಷ್ಣನ ಸೇವೆ: ಪುತ್ತಿಗೆ ಶ್ರೀ

11:32 PM Dec 03, 2023 | Team Udayavani |

ಉಡುಪಿ: ಅತಿಥಿಗಳಾಗಿ ಬಂದ ಶ್ರೀಕೃಷ್ಣನ ಭಕ್ತರಿಗೆ ಸಕಲ ಸೌಕರ್ಯಗಳನ್ನು ಒದಗಿಸಿ ಕೊಡುವುದು ಕೂಡ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಸೇವೆಯಾಗಿದೆ.

Advertisement

ಭಕ್ತರು ಈ ಪರ್ಯಾಯೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀ ಪುತ್ತಿಗೆ ಮಠದಲ್ಲಿ ನಡೆದ ಸ್ವಾಗತ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ, ಸಮಿತಿಯ ಮಹಾ ಪೋಷಕ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ಪರ್ಯಾಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಪುತ್ತಿಗೆ ಶ್ರೀಗಳ ಪರ್ಯಾಯವನ್ನು ವೈಭವದಿಂದ ನಡೆಸೋಣ ಎಂದರು.

ಉಪಸಮಿತಿಯ ಸಂಚಾಲಕರಾದ ಎಂ.ಎಲ್‌. ಸಾಮಗ, ಸುಪ್ರಸಾದ್‌ ಶೆಟ್ಟಿ ಬೈಕಾಡಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗೇಶ ಹೆಗ್ಡೆ, ರಂಜನ್‌ ಕಲ್ಕೂರ ಅವರು ತಮ್ಮ ಕರ್ತವ್ಯಗಳ ಸಿದ್ಧತೆ ಬಗ್ಗೆ ತಿಳಿಸಿದರು.

Advertisement

ಮಠದ ದಿವಾನ ನಾಗರಾಜ್‌ ಆಚಾರ್ಯ ಪ್ರಸ್ತಾವನೆಗೈದರು. ಸಮಿತಿಯ ಪ್ರಸನ್ನ ಆಚಾರ್ಯ, ಮಟ್ಟಿ ಲಕ್ಷ್ಮೀನಾರಾಯಣ್‌ ರಾವ್‌, ಹರಿಯಪ್ಪ ಕೋಟ್ಯಾನ್‌, ಬಾಲಾಜಿ ಯೋಗೀಶ್‌ ಶೆಟ್ಟಿ, ಸಂತೋಷ್‌ ಶೆಟ್ಟಿ ತೆಂಕಾರಗುತ್ತು, ದಿನೇಶ್‌ ಪುತ್ರನ್‌ ಸಹಿತ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬೆಳಪು ದೇವಿ ಪ್ರಸಾದ್‌ ಶೆಟ್ಟಿ ವಂದಿಸಿದರು. ರಮೇಶ್‌ ಭಟ್‌ ಕೆ. ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next