Advertisement

Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣಮಠ: ಇಂದು ಗೀತೋತ್ಸವ, ಸಹಸ್ರಕಂಠ ಗೀತಾ ಪಾರಾಯಣ

01:21 AM Dec 11, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯ ದಲ್ಲಿ ಗೀತಾ ಜಯಂತಿ ಪ್ರಯುಕ್ತ ಬೃಹತ್‌ ಗೀತೋತ್ಸವ, ಸಹಸ್ರಕಂಠ ಗೀತಾ ಪಾರಾಯಣವು ಡಿ.11ರ ಬೆಳಗ್ಗೆ 9.30ರಿಂದ ರಾಜಾಂಗಣದಲ್ಲಿ ಜರಗಲಿದೆ. ಸಭಾ ಕಾರ್ಯಕ್ರಮದ ಅನಂತರ ಸಹಸ್ರಕಂಠ ಗೀತಾ ಪಾರಾಯಣ ನೆರವೇರಲಿದೆ. ಬೆಳಗ್ಗೆ 9ಕ್ಕೆ ರಥಬೀದಿಯಲ್ಲಿ ಗೀತಾ ಶೋಭಾಯಾತ್ರೆ ಜರಗಲಿದೆ.

Advertisement

ಸಭೆಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡುವರು. ಕಿರಿಯ ಪಟ್ಟದ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು. ದಿಲ್ಲಿಯ ಬಿಎಪಿಎಸ್‌ ಸ್ವಾಮಿನಾರಾಯಣ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಮಹಾಮಹೋಪಾಧ್ಯಾಯ ಸಾಧು ಶ್ರೀ ಭದ್ರೇಶ ದಾಸ್‌ ಉದ್ಘಾಟಿಸಲಿದ್ದಾರೆ.

ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ
ಡಿ. 12ರ ಸಂಜೆ 6ಕ್ಕೆ ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರಿಂದ 18 ದಿನಗಳ ಕಾಲ ನಡೆಸಿದ ಗೀತಾ ಪ್ರವಚನ ಮಂಗಳ, ಹರಿಕಥಾ ಮಂಗಳ, ಡಿ. 13ರ ಸಂಜೆ 5ರಿಂದ ಗೀತಾ ಗಾಯನ ಮತ್ತು ವ್ಯಾಖ್ಯಾನ, ಡಿ. 15ರ ಬೆಳಗ್ಗೆ 9ರಿಂದ ಗೀತಾ ಸಾಹಿತ್ಯೋತ್ಸವ ಮತ್ತು ಕವಿಗೋಷ್ಠಿ, ಡಿ. 16ರ ಸಂಜೆ 5ರಿಂದ ಡಾ| ಪ್ರಭಾಕರ ಜೋಷಿ ಅವರಿಂದ “ಯಕ್ಷಗಾನದಲ್ಲಿ ಗೀತೆಯ ಮೆರಗು’ ಉಪನ್ಯಾಸ, ಡಿ. 17ರ ಸಂಜೆ 5.15ರಿಂದ ಶ್ರೀ ಸುಜ್ಞಾನೇಂದ್ರ ಶ್ರೀಪಾದರ ಗೀತಾನುವಾದ ಕೃತಿ “ಗೀತಾಮೃತ ಸಾರ’ ಬಿಡುಗಡೆ, ಡಿ. 18ರ ಸಂಜೆ 5.30ರಿಂದ ಗಂಗಾವತಿ ಪ್ರಾಣೇಶ್‌ ಮತ್ತು ಬಳಗದವರಿಂದ ಗೀತಾ ಹಾಸ್ಯೋತ್ಸವ, ಮೆಟ್ಟೂರು ಸಹೋದರರಿಂದ ಗೀತಾ ದಾಸವಾಣಿ.

ಡಿ. 19ರ ಸಂಜೆ 5ರಿಂದ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಅವರಿಂದ “ಆರೆಸ್ಸೆಸ್‌ ಮತ್ತು ಭಗವದ್ಗೀತೆ’ ಉಪನ್ಯಾಸ, ಡಿ. 21ರ ಬೆಳಗ್ಗೆ 9ರಿಂದ ಶಾಲಾ ವಿದ್ಯಾರ್ಥಿಗಳಿಂದ ಗೀತೋತ್ಸವ, ಸಂಜೆ 5.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ “ಶ್ರೀ ಭಗವಾನುವಾಚ’ ಕೃತಿ ಬಿಡುಗಡೆ, ಡಿ. 22ರ ಬೆಳಗ್ಗೆ 10ರಿಂದ ರೋಹಿತ್‌ ಚಕ್ರತೀರ್ಥ ಮತ್ತು ತಂಡದಿಂದ ಯುವ ಗೀತೋತ್ಸವ, ಡಿ. 23ರ ಸಂಜೆ 5ರಿಂದ ಅಡ್ಡಂಡ ಕಾರ್ಯಪ್ಪ ಅವರಿಂದ “ಕ್ಷಾತ್ರ ಮತ್ತು ಭಗವದ್ಗೀತೆ’ ಉಪನ್ಯಾಸ, ಡಿ. 24ರ ಸಂಜೆ 5ರಿಂದ ಕೆ.ಪಿ. ಪುತ್ತೂರಾಯ ಅವರಿಂದ “ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ’ ಉಪನ್ಯಾಸ, ಡಿ. 25ರ ಸಂಜೆ 5ರಿಂದ ಜ| ಶ್ರೀಶಾನಂದ ಮತ್ತು ಚಿರಂಜೀವಿ ಭಟ್‌ ಅವರಿಂದ “ನ್ಯಾಯಾಂಗದಲ್ಲಿ ಭಗವದ್ಗೀತೆಯ ಪ್ರಸ್ತುತಿ’ ಉಪನ್ಯಾಸ.

ಡಿ. 26ರ ಸಂಜೆ 5ರಿಂದ ಗಂಜೀಫ‌ ರಘುಪತಿ ಭಟ್‌ ಅವರಿಂದ “ಚಿತ್ರಕಲೆ ಮತ್ತು ಭಗವದ್ಗೀತೆ’, 7ರಿಂದ ಎಂ.ಡಿ. ಕೌಶಿಕ್‌ ಅವರಿಂದ ಗೀತಾ ಜಾದೂ, ಡಿ. 27ರ ಸಂಜೆ 5ರಿಂದ ಡಾ| ವೀಣಾ ಬನ್ನಂಜೆ ಅವರಿಂದ “ವಚನ ಸಾಹಿತ್ಯ ಮತ್ತು ಗೀತೆ’ ಪ್ರವಚನ, 7ರಿಂದ ಗೀತಾ ಸಂಗೀತ ಲಹರಿ, ಡಿ. 28ರ ಬೆಳಗ್ಗೆ 6.30ರಿಂದ ಭಗವದ್ಗೀತಾ ಮಹಾಯಾಗ, ಸಂಜೆ 5ರಿಂದ ವಿಶ್ವಗೀತಾ ಭಕ್ತ ಸಮಾವೇಶ, ಪುಸ್ತಕ ಬಿಡುಗಡೆ, ವಿವಾಹ ವೆಬ್‌ಸೈಟ್‌ ಬಿಡುಗಡೆ, 7ರಿಂದ ಗೀತಾ ನೃತ್ಯ ರೂಪಕ, ಡಿ. 29ರ ಬೆಳಗ್ಗೆ 10ರಿಂದ ಸಹಸ್ರ ಗೀತಾಲೇಖನ ಯಜ್ಞ ದೀಕ್ಷಾ ಸಮಾರಂಭ, ಸಂಜೆ 6ರಿಂದ ಗೀತಾ ಜ್ಞಾನ ದೀಪೋತ್ಸವ ನೆರವೇರಲಿದೆ ಎಂದು ಶ್ರೀ ಮಠದ ದಿವಾನರ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next