Advertisement

Udupi Paryaya: ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ- ಡಾ| ಹೆಗ್ಗಡೆ

10:42 AM Jan 19, 2024 | Team Udayavani |

ಉಡುಪಿ: ಪುತ್ತಿಗೆ ಸ್ವಾಮೀಜಿಯವರು ಇಸ್ಕಾನ್‌ ಸ್ಥಾಪಕ ಪ್ರಭುಪಾದರಂತೆ ಸಾಮಾನ್ಯರಾಗಿ ವಿದೇಶಗಳಿಗೆ ಹೋಗಿ ವಿಶ್ವ ಗೀತಾ ಪ್ರಚಾರದ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರ ಪಸರಿಸಲು ಕಾರಣರಾಗಿದ್ದಾರೆ. ವಿದೇಶೀಯರು ಭಾರತದಿಂದ ಕೃಷ್ಣ ಸಂದೇಶವನ್ನು ಹೊತ್ತೂಯ್ಯಲಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಗುರುವಾರ ಬೆಳಗ್ಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದ ಅವರು, ವಿದೇಶಗಳಲ್ಲಿ ಧರ್ಮ ಪ್ರಸಾರ ಸಾಮಾನ್ಯ ಸಾಧನೆಯಲ್ಲ. ಅಲ್ಲಿ ಹಣ ಸಂಪಾದಿಸುವುದಕ್ಕಿಂತ ಸಾಲ ಮಾಡಿ ಮಂದಿರವನ್ನು ಕಟ್ಟುವ ಸವಾಲನ್ನು ಎದುರಿಸಬೇಕಾಗುತ್ತದೆ. ಪಾಶ್ಚಾತ್ಯರು ಭಾರತವನ್ನು ಹಾವಿನ ದೇಶ ಎನ್ನುತ್ತಿದ್ದರು. “ಬಡ ದೇಶ’ ಈಗ “ಬಡಾ ದೇಶ’ ಆಗಿದೆ ಎಂದರು. ಉಡುಪಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ಎರಡು ವರ್ಷಗಳ ಪರ್ಯಾಯ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಭಗವದ್ಗೀತೆ ಪೂರ್ತಿ ಕಂಠಪಾಠ ಹೇಳುವ ಬಾಲಕಿ
ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಹೇಳುವ ಮೂರೂವರೆ ವರ್ಷದ ಬಾಲಕಿ ಕೋಕಿಲಾ ವೇಮೂರಿ ಅವರಿಗೆ ಪುತ್ತಿಗೆ ಶ್ರೀಪಾದರು ಸಭೆಯಲ್ಲಿ ಕೋಕಿಲಾ ವೇಮೂರಿಗೆ ಚಿನ್ನದ ತುಳಸಿ ಮಣಿ ಬ್ರೇಸ್‌ಲೆಟ್‌ ನೀಡಿ ಆಶೀರ್ವದಿಸಿದರು.

ಕೋಕಿಲಾ ತಾಯಿ ಅವನಿ ಮೂಲತಃ ಆಂಧ್ರ ಪ್ರದೇಶದವರು. ಈಗ ಅಮೆರಿಕದಲ್ಲಿದ್ದಾರೆ. ಭಗವದ್ಗೀತೆಯನ್ನು ನಿರಂತರ ಪಠನೆ ಮಾಡುತ್ತಿದ್ದಾರೆ. ಮಗು ಗರ್ಭದಲ್ಲಿದ್ದಾಗಲೂ ಪಠನೆಯನ್ನು ನಿಲ್ಲಿಸಿರಲಿಲ್ಲ. “ಮಗು ಜನಿಸಿ ಎರಡೂವರೆ ವರ್ಷಕ್ಕೆ ವಿದೇಶದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯರ ಭಗವದ್ಗೀತೆ ತರಗತಿಗೆ ಹೋಗುತ್ತಿದ್ದೆವು. ನಿತ್ಯವೂ ಗೀತೆಯ ಶ್ಲೋಕಗಳನ್ನು ಕಲಿಸಿಕೊಡುತ್ತಿದ್ದರು. ಕೋಕಿಲಾ ಅದನ್ನು ನಿತ್ಯ ಪಠನೆ ಮಾಡತೊಡಗಿದಳು. ಇದೀಗ ಎಲ್ಲ ಶ್ಲೋಕಗಳನ್ನು ನಿರರ್ಗಳವಾಗಿ ಪಠನೆ ಮಾಡುತ್ತಾಳೆ’ ಎಂದು ಅವನಿ “ಉದಯವಾಣಿ’ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next