Advertisement

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

01:06 AM Dec 30, 2024 | Team Udayavani |

ಮಕ್ಕಳನ್ನು ಅವರೆದುರು ಹೊಗಳಬಾರದು. ಇದರಿಂದ “ಇಗೋ’ ಬೆಳೆಯುತ್ತದೆ. ಬೇರೆಯವರ ಬಳಿ ಗುಟ್ಟಿನಲ್ಲಿ ಬೇಕಾದರೆ ಹೇಳಲಿ. ನನಗೆ ಚಿಕ್ಕಪ್ರಾಯದಲ್ಲಿ 98 ಮಾರ್ಕ್‌ ಬಂದಾಗ ಶಿಕ್ಷಕರು ಹೊಗಳಿದರೂ ತಂದೆ ಹೊಡೆದರು. ಆಗಲೇ ನನಗೆ ನೂರು ಮಾರ್ಕ್‌ ತೆಗೆಯಲು ಚಾಲೆಂಜ್‌ ಬಂತು. ಆಗ ತಂದೆ ಹೊಗಳಿದ್ದರೆ ನಾನು ನೂರು ಮಾರ್ಕ್‌ ತೆಗೆಯುತ್ತಿರಲಿಲ್ಲ. ಮಾತ್ರವಲ್ಲ “ನನಗಾರು ಸಮಾನರಿದ್ದಾರೆ’ ಎಂಬ ಅಹಂಕಾರ, “ಇಗೋ’ ಬೆಳೆಯುತ್ತಿತ್ತು. ಈಗ ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ಮಕ್ಕಳಲ್ಲಿ “ಇಗೋ’ ಹೆಚ್ಚಿಸುತ್ತಿದ್ದೇವೆ. ಲೋಕದಲ್ಲಿ ಎಷ್ಟೋ ಮಕ್ಕಳು 98 ಮಾರ್ಕ್‌ ತೆಗೆಯುವುದಿಲ್ಲವೆ? ನೀನು ಮಾತ್ರವೇ ತೆಗೆದದ್ದೆ ಎಂದಾಗ ಮುಂದೆ ಹುಟ್ಟಲಿರುವ “ಇಗೋ’ ಹೋಗುತ್ತದೆ.

Advertisement

ಮನುಷ್ಯನ ಅಹಂಕಾರವನ್ನು ಕಡಿತ ಮಾಡುವುದೇ ವೇದಾಂತದ ತಣ್ತೀ. ಇದರರ್ಥ ಮಕ್ಕಳು ಮುಂದೆ ಬಾರದೆಂದಲ್ಲ. ಚಿಕ್ಕ ಸಾಧನೆಯನ್ನೂ ವೈಭವೀಕರಿಸುವುದು ಸರಿಯಲ್ಲ. ಇಗೋ ಹೆಚ್ಚಿಸಿ ಕೆಲಸ ಮಾಡಿಸುವುದು ಸುಲಭ, ಆದರೆ ಅಪಾಯ. ಇಗೋ ನಾಶ ಮಾಡಿ ಕೆಲಸ ಮಾಡಿಸುವುದು ಕಷ್ಟ, ಆದರೆ ಅದು ಶಾಶ್ವತ. ಕೃಷ್ಣ ಹೇಳುವುದು ಶಾಶ್ವತವಾದದ್ದನ್ನು. ಈಗ ತಂದೆ ತಾಯಿಗಳಿಗೆ ಗೌರವ ಕಡಿಮೆಯಾಗಲು ಇದೇ ಕಾರಣ. “ನಮ್ಮ ಮಕ್ಕಳು ಬ್ರಿಲ್ಲಿಯಂಟ್‌. ನಾವು ಇಷ್ಟು ಹುಷಾರಿರಲಿಲ್ಲ’ ಎಂದು ತಂದೆತಾಯಿಗಳು ಹೇಳುವುದರಿಂದಲೇ ಮಕ್ಕಳಲ್ಲಿ “ನಿಮಗೇನು ಗೊತ್ತು? ನಾವೇಕೆ ನಿಮಗೆ ಗೌರವ ಕೊಡಬೇಕು’ ಎನ್ನುತ್ತಾರೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next