Advertisement
ನಿಲ್ದಾಣ ಅಧಿಕೃತವಾಗಿ ಉದ್ಘಾಟನೆಯಾಗದೆ ಇದ್ದರೂ ಬಸ್‌ಗಳು ನಿಲ್ದಾಣ ಪ್ರವೇಶಿಸುತ್ತಿವೆ. ಕೋವಿಡ್-19, ಪ್ರಯಾಣಿಕರ ಕೊರತೆಯಿಂದ ನರ್ಮ್ ಬಸ್‌ಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದವು. ಜತೆಗೆ ಕುಡುಕರ ಆಶ್ರಯ ತಾಣ ಆಗಿತ್ತು. ಈ ಮಾರ್ಗದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಸಂಚರಿ ಸಲು ಭಯಪಡುತ್ತಿದ್ದರು.
“ಉದಯವಾಣಿ ಸುದಿನ’ ಈ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕಾವಲುಗಾರರನ್ನು ನೇಮಿಸಿದ್ದಾರೆ. ಜಿಲ್ಲೆಯಲ್ಲಿ ನರ್ಮ್ ಬಸ್‌ಗಳು 2016ರಲ್ಲಿ ಆರಂಭವಾಗಿದ್ದವು. ಈ ಸಂದರ್ಭ ಸರಿಯಾದ ಬಸ್ ನಿಲ್ದಾಣವಿಲ್ಲ ಎನ್ನುವ ಕೊರಗು ನೀಗಿಸುವ ನಿಟ್ಟಿನಲ್ಲಿ ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಶಿಕ್ಷಣ ಇಲಾಖೆ ಜಾಗದಲ್ಲಿ 2017ರ ಸೆ.10ರಂದು ಅಂದಿನ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ನರ್ಮ್ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.. ಅಂತೆಯೇ ಗುತ್ತಿಗೆ ಕಾಮಗಾರಿ ಅನ್ವಯ 2018ರೊಳ ಗಾಗಿ ನರ್ಮ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ, ಬಸ್ ಸಂಚಾರಕ್ಕೆ ಮುಕ್ತಗೊಳಿಸಬೇಕಾಗಿತ್ತು. ಆದರೆ ಗುತ್ತಿಗೆದಾರರು ವಿವಿಧ ಕಾರಣ ನೀಡಿ ಕಾಮಗಾರಿಯನ್ನು 2019ರ ಕೊನೆಗೆ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ನಿಲ್ದಾಣದಲ್ಲಿರುವ ಅಂಗಡಿಗಳು ಕಾರ್ಯಾಚರಿಸುತ್ತಿವೆ. ಮೂರು ಅಂತಸ್ತು
ನಿಲ್ದಾಣವನ್ನು ಸುಮಾರು 41 ಸೆಂಟ್ಸ್ ಜಾಗದಲ್ಲಿ 3 ಅಂತಸ್ತುಗಳನ್ನು ಒಳಗೊಂಡ ಕಟ್ಟಡ ನಿರ್ಮಿಸಲಾಗಿದೆ.
Related Articles
ಪ್ರಸ್ತುತ ಚುನಾವಣೆ ಪ್ರಚಾರದ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಸಾರಿಗೆ ಸಚಿವರು ಜನವರಿ ತಿಂಗಳಿನಲ್ಲಿ ನರ್ಮ್ ಬಸ್ ನಿಲ್ದಾಣ ಉದ್ಘಾಟಿಸಲಿದ್ದಾರೆ.
-ಕೆ. ರಘುಪತಿ ಭಟ್, ಶಾಸಕರು, ಉಡುಪಿ.
Advertisement
ಮದ್ಯ ಸೇವಿಸಿ ನಿದ್ರಿಸಲು ಅವಕಾಶವಿಲ್ಲನರ್ಮ್ ಬಸ್ ನಿಲ್ದಾಣಕ್ಕೆ ಕಾವಲುಗಾರರನ್ನು ನೇಮಿಸಲಾಗಿದೆ. ನಿಲ್ದಾಣದಲ್ಲಿ ಮದ್ಯ ಸೇವಿಸಿ ನಿದ್ದೆ ಮಾಡಲು ಅವಕಾಶವಿಲ್ಲ. ಸ್ವತ್ಛತೆ ಕಡೆಗೂ ಗಮನಹರಿಸಲಾಗುತ್ತಿದೆ.
-ಉದಯ ಕುಮಾರ್ ಶೆಟ್ಟಿ, ಕೆಎಸ್‌ಆರ್‌ಟಿಸಿ ಉಡುಪಿ ಡಿಪೋ