Advertisement

ಸಕಾಲದಲ್ಲಿ ಸೇವೆ ಸಿಗದೆ ಸಾರ್ವಜನಿಕರ ಪರದಾಟ…

01:00 AM Mar 11, 2019 | Team Udayavani |

ಉಡುಪಿ: ನಗರಸಭೆಯಲ್ಲಿ ಯಾವುದೇ ಕೆಲಸಗಳಿಗೆ ವೇಗ ಸಿಗುತ್ತಿಲ್ಲ. ಸಾರ್ವಜನಿಕರು ಸಣ್ಣ ಕೆಲಸಕ್ಕೂ ವಾರಗಟ್ಟಲೆ ಕಾಯಬೇಕಾದ ಸ್ಥಿತಿ. ಇದಕ್ಕೆ ಕಾರಣ ಸಿಬಂದಿ ಕೊರತೆ. 

Advertisement

1935ರಲ್ಲಿ ನಗರಸಭೆಯಾಗಿದ್ದ ಉಡುಪಿ ಬಳಿಕ ಸುದೀರ್ಘ‌ ಅವಧಿ ಪುರಸಭೆಯಾಗಿತ್ತು. ರಾಜ್ಯ ಸರಕಾರ 1995ರಲ್ಲಿ ನಗರಸಭೆಯನ್ನಾಗಿ ಘೋಷಿಸಿತು. ಅಂದಿನಿಂದ ಈವರೆಗೂ ಪೂರ್ಣ ಪ್ರಮಾಣದ ಸಿಬಂದಿಯೇ ನೇಮಕವಾಗಿಲ್ಲ.  

418ಕ್ಕೆ ಕೇವಲ 129
ನಗರಸಭೆಗೆ ಇರುವ ಒಟ್ಟು 418 ಹುದ್ದೆಗಳ ಪೈಕಿ ಕೇವಲ 129 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅದರಲ್ಲಿ 4 ಅಧಿಕಾರಿಗಳು ಹೆಚ್ಚುವರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 289 ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ ಕೆಲವು ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ನಿರ್ವಹಿಸಲಾಗುತ್ತಿದೆ.  

ಹೆಚ್ಚಿದ ಒತ್ತಡ
ನಗರಸಭೆಯ 35 ವಾರ್ಡ್‌ಗಳ ಕೆಲಸವನ್ನು ಇರುವ 129 ಮಂದಿಯೇ ನಿಭಾಯಿಸಬೇಕಿದೆ. ಇದರಿಂದ ಒತ್ತಡ ಹೆಚ್ಚಿದೆ. ನಗರ ವ್ಯಾಪ್ತಿಯ ನಿವೇಶನ, ಮನೆ ಮಾರಾಟ, ಖರೀದಿ ಪ್ರಕ್ರಿಯೆ ಕಷ್ಟವಾಗಿದೆ. ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಸೇವೆ ಎನ್ನುವುದೇ ಮರೀಚಿಕೆಯಾಗಿದೆ. 

ಓರ್ವ ಸಿಬಂದಿಗೆ 4 ಜವಾಬ್ದಾರಿ
ಓರ್ವ ಸಿಬಂದಿಗೆ ನಾಲ್ಕು ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ವಾರಕ್ಕೆ ಎರಡು ಬಾರಿ ಭೇಟಿ ನೀಡುತ್ತಿದ್ದ ಸ್ವತ್ಛತಾ ಸಿಬಂದಿಯೂ ಈಗ ತಿಂಗಳಿಗೊಮ್ಮೆ ಬರುತ್ತಿದ್ದಾರೆ ಎನ್ನುತ್ತಾರೆ ನಾಗರಿಕರು.    

Advertisement

ಖಾಲಿ ಹುದ್ದೆ 
ಹಿರಿಯ ಪ್ರೋಗ್ರಾಮರ್‌ -1, ಕಿರಿಯ ಸಹಾಯಕ ಎಂಜಿನಿಯರ್‌ -1, ಸ್ಟೆನೋಗ್ರಾಫ‌ರ್‌ -2, ಕಂದಾಯ ನಿರೀಕ್ಷಕರು -2, ಅಸಿಸ್ಟೆಂಟ್‌ -3, ನೀರು ಸರಬರಾಜು ನಿರ್ವಹಕ-8, ಡಾಟಾ ಆಪರೇಟರ್‌ -4, ಸಹಾಯಕ ಆರೋಗ್ಯಾಧಿಕಾರಿ -2, ಎಲೆಕ್ಟ್ರೀಷಿಯನ್‌ ಗ್ರೇಡ್‌ |-1, ಸಮುದಾಯ ಸಂಘಟಕ- 1, ಎರಡನೇ ದರ್ಜೆ ಸಹಾಯಕರು- 7, ಬಿಲ್‌ ಸಂಗ್ರಾಹಕರು- 4, ವಾಹನ ಚಾಲಕರು -10, ಎಲೆಕ್ಟ್ರೀಷಿಯನ್‌ ಗ್ರೇಡ್‌ ||- 1ನೀರು ಗಂಟಿಗಳು -6, ಪ್ರಯೋಗಾಲಯ ತಂತ್ರಜ್ಞ – 1, ನೈರ್ಮಲ್ಯ ಮೇಲ್ವಿಚಾರಕರು -7, ಪ್ಲಂಬರ್‌- 1, ತೋಟದ ಮೇಲೆ ಉಸ್ತುವಾರಿ 1, ವಾಲ್‌ ಮ್ಯಾನ್‌ -2, ಲೋಡರ್‌ -15, ಕ್ಲಿನರ್‌ -6, ತೋಟ ಸಹಾಯಕ-3, ಹೆಲ್ಪರ್‌ -44, ಪೌರ ಕಾರ್ಮಿಕರು -156 ಸೇರಿದಂತೆ ಒಟ್ಟು 289 ಹುದ್ದೆಗಳು ಖಾಲಿ ಇವೆ. ಇದರಲ್ಲಿ ದಿನಕೂಲಿ ಆಧಾರದ ಮೇಲೆ ಸುಮಾರು 118 ಜನರನ್ನು ಸಿಬಂದಿಯನ್ನು ಪೌರಕಾರ್ಮಿಕ ಹುದ್ದೆಗೆ ನೇಮಿಸಿಕೊಂಡು ನಿರ್ವಹಿಸಲಾಗುತ್ತಿದೆ.  ಹೊರ ಗುತ್ತಿಗೆ ಆಧಾರದ ಮೇಲೆ ಕುಡಿಯುವ ನೀರಿಗೆ ಸಂಬಂಧಿಸಿ 22 ಜನರನ್ನು ನೇಮಿಸಿಕೊಂಡ ಕಾರ್ಯ ಹೊರಗುತ್ತಿಗೆ ನೌಕರರ ಒಟ್ಟು ಸಂಖ್ಯೆ 55. 

ತೆರವುಗೊಂಡ ಹುದ್ದೆ ಭರ್ತಿಯಾಗಿಲ್ಲ
ನಗರಸಭೆ ಸಿಬಂದಿಯ ನಿವೃತ್ತಿಯ ಅನಂತರ ತೆರವುಗೊಂಡ ಹುದ್ದೆಗಳು ಭರ್ತಿಯಾಗಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿಲ್ಲ. ಹೊರಗುತ್ತಿಗೆ ಆಧಾರದ‌ ಮೇಲೆ ಸಿಬಂದಿಗಳನ್ನು ನೇಮಕ ಮಾಡಿದರೂ ಜನರಿಗೆ ಸಕಾಲದಲ್ಲಿ ಕೆಲಸವಾಗುತ್ತಿಲ್ಲ. 

ಸರಕಾರ ಕ್ರಮ 
ಉಡುಪಿ ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ.
-ಆನಂದ ಕಲ್ಲೋಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ

ಅನೇಕ ಸಮಸ್ಯೆಗಳು ನಗರಸಭೆಯಲ್ಲಿ ಸಿಬಂದಿಯ ಕೊರತೆಯಿಂದಾಗಿ ಜನರಿಗೆ ಸೇವೆಗಳು ಸಕಾಲದಲ್ಲಿ ದೊರಕುತ್ತಿಲ್ಲ. ಇದರಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಹಿಂದೆ ವಾರಕ್ಕೊಮ್ಮೆ ಬರುತ್ತಿದ್ದ ಸ್ವತ್ಛತಾ ಸಿಬಂದಿ ಇದೀಗ ಕಾಣ ಸಿಗುವುದೇ ಅಪರೂಪವಾಗಿದೆ.
-ಮಂಜುನಾಥ ಮಣಿಪಾಲ, ನಗರಸಭೆ ಸದಸ್ಯರು

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next