Advertisement
ವಕೀಲರು, ಲೆಕ್ಕಪರಿಶೋಧಕರು ಹೀಗೆ ನವೀನ ವೃತ್ತಿಗಳನ್ನೂ ಭಗವಂತನ ಪೂಜೆಯಾಗಿ ಮಾಡಲು ಸಾಧ್ಯವಿದೆ. ಬೇರೆಯವರ ಬದುಕು ಹಾಳು ಮಾಡುವಂತಹ ವೃತ್ತಿಗಳನ್ನು ಕೈಗೊಳ್ಳಲೇಬಾರದು. ಇಂತಹ ವೃತ್ತಿಗಳ ಅಗತ್ಯವೂ ಇಲ್ಲ. ಇಂತಹ ವೃತ್ತಿಯಿಂದ ಬಂದ ಆದಾಯವನ್ನು ದೇವರಿಗೆ ಸಮರ್ಪಣೆ ಮಾಡುವುದರಿಂದಲೂ ಪ್ರಯೋಜನವಿಲ್ಲ. ಒಟ್ಟಾರೆಯಾಗಿ ತಪ್ಪಾದ ವೃತ್ತಿಯನ್ನು ಕೈಗೊಳ್ಳದಿರುವುದು ಮಾತ್ರವಲ್ಲ, ಹಾಗೆ ಸಂಶಯಾತೀತವಾಗಿಯೂ ಇರಬೇಕು. ಗೀತೆಯಲ್ಲಿ ಶ್ರೀಕೃಷ್ಣ ‘ಬೋಧಯತಿ ಭಗವಾನ್ ನಾರಾಯಣಃ’ ಎಂದು ಹೇಳಿದ್ದಾನೆ ವಿನಾ ‘ಆಜ್ಞಾಪಯತಿ’, ‘ಸಂದೇಶಯತಿ’ ಎನ್ನಲಿಲ್ಲ. ಅಂದರೆ ಶ್ರೀಕೃಷ್ಣನ ಉದ್ದೇಶ ಆದೇಶ ಕೊಡುವುದಲ್ಲ, ಒಳಗಿನಿಂದಲೇ ಜ್ಞಾನ ಉದ್ದೀಪಿಸುವಂತೆ ಮಾಡುವುದು. ಈ ಜ್ಞಾನ ಉದ್ದೀಪನದ ಮುಹೂರ್ತ ಶ್ರೀಕೃಷ್ಣಲೀಲೋತ್ಸವದಂದು ಆಗಲೆಂದು ಗೀತಾಚಾರ್ಯನಲ್ಲಿ ಪ್ರಾರ್ಥಿಸುತ್ತೇವೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811