ಒಬ್ಬ ದೇಶದ ಮುಖ್ಯಸ್ಥ ನಿಧನ ಹೊಂದಿದ್ದರೆ ಆತನ ಅನಂತರ ಆ ಸ್ಥಾನವನ್ನು ಯಾರು ತುಂಬಲಿದ್ದಾರೆಂಬುದನ್ನು ಘೋಷಿಸಿದ ಬಳಿಕವೇ ನಿಧನದ ಸುದ್ದಿಯನ್ನು ಪ್ರಕಟಿಸುತ್ತಾರೆ. ಇಲ್ಲವಾದರೆ ಅರಾಜಕತೆ ಸೃಷ್ಟಿಯಾಗುತ್ತದೆ. ಹಿಂದೆ ವಂಶದ ಹಿರಿಯನಿಗೆ ಅಧಿಕಾರವನ್ನು ಹಂಚುವ ಕ್ರಮವಿತ್ತು.
ಧೃತರಾಷ್ಟ್ರ ಕುರುಡನಾದರೂ ಅವನಿಗೇ ಅಧಿಕಾರ ಕೊಡಲಿಲ್ಲವೆ? ಹುಟ್ಟಿನ ಮೂಲವಿರುವುದರಿಂದಲೇ ತಂದೆಯ ಆಸ್ತಿಯನ್ನು ಮಕ್ಕಳಿಗೆ ಹಂಚುವುದು. ತಂದೆಯ ಆಸ್ತಿಯನ್ನು ಹಂಚುವುದು ಮಮತೆಯ ಲಕ್ಷಣವಲ್ಲ, ಮುಂದೆ ಯಾರು ಎಂಬ ಗೊಂದಲ, ಅರಾಜಕತೆ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ. ಆಸ್ತಿ, ರಕ್ಷಣೆ, ಜವಾಬ್ದಾರಿಗಳಲ್ಲಿ ಹೀಗೆ ಎಲ್ಲ ಕೆಲಸಗಳನ್ನು ಮೊದಲೇ ನಿಗದಿಪಡಿಸುತ್ತಿದ್ದರು. ಏಕೆಂದರೆ ಮುಂದೊಂದು ದಿನ ಅಭಾವ ಸೃಷ್ಟಿಯಾಗಬಾರದು.
ಈ ಅಭಾವದಿಂದ ಧರ್ಮ ನಾಶವಾದರೆ ಇದು ಇಲ್ಲಿಗೇ ನಿಲ್ಲದೆ ಅಧರ್ಮ ಆವರಿಸುವ ಇನ್ನೊಂದು ಅಪಾಯವಿದೆ. ಇದನ್ನು ಕಂಡಾಗ ಜಾತಿಗಳ ಮಹತ್ವ ಅರಿವಾಗುತ್ತದೆ. ಇದು ಜಾತಿ ವ್ಯವಸ್ಥೆಯ ಇನ್ನೊಂದು ಮುಖ. ಈ ಕಾರಣದಿಂದಲೇ ಇಂದು ದೇವಸ್ಥಾನಗಳ ಸಂಸ್ಕೃತಿ ನಡೆದುಬಂದಿದೆ. ಯಾರ್ಯಾರು ಯಾವ್ಯಾವ ಕೆಲಸಗಳನ್ನು ಮಾಡಬೇಕೆಂದು ಆಯಾ ವಂಶಗಳಿಗೆ ನಿಗದಿಪಡಿಸಿದ್ದರು. ಜವಾಬ್ದಾರಿಗಳನ್ನು ಹಂಚಿಹಾಕಲು ಯೋಜಿಸಿದ ಮಾರ್ಗವಿದು. ಇದರಿಂದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811